Haridasa Sahitya — Vyasadasa
Shreemahaa lakumi deviye
ಶ್ರೀ ಮಹಾಲಕುಮಿ ದೇವಿಯೆ,
Composer: Vijaya Dasaru · Deity: Lakshmi Devi · Genre: Bhakti
Kannada lyrics
ಶ್ರೀ ಮಹಾಲಕುಮಿ ದೇವಿಯೆ, ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ||ಪ|| ಹೇಮಗರ್ಭ ಕಾಮಾರಿ ಶಕ್ರಸುರ ಸ್ತೋಮ ವಂದಿತಳೆ ಸೋಮ ಸೋದರಿಯೆ || ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ ಕಟ್ಟಾಣಿ ತ್ರಿವಳಿ ಕೊರಳೋಳೆ ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ ಕಟ್ಟ ಕಂಕಣ ಕೈಬಳೆ ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ ಇಟ್ಟು ಶೋಭಿಸುವ ಅಷ್ಟಸಂಪನ್ನೆ || ಸಕಲ ಶುಭಗುಣಭರಿತಳೆ ಏಕೋದೇವಿಯೆ ವಾಕುಲಾಲಿಸಿ ನೀ ಕೇಳೆ ನೋತನೀಯನ್ನ ಮಹಲೀಲೆ ಕೊಂಡಾಡುವಂಥ ಏಕಮನವ ಕೊಡು ಶೀಲೆ ಬೇಕು ಬೇಕು ನಿನ್ನ ಪತಿ ಪಾದಾಬ್ಜವ ಏಕಾಂತದಿ ಪೂಜಿಪರ ಸಂಗವ ಕೊಡು ಲೋಕದ ಜನರಿಗೆ ನಾ ಕ…
Transliteration
Shreemahaalakumideviye komalaangiye | Saamagaayana priyale || pa || Hemagarbha kaamaari shakra sura stoma | Vanditale soma sodariye || a. Pa. || Batta kunkuma nosalole muttina hosa | Kathyaani trivali koralole | Itta ponnole kiviyole pavalada kaiya | Kattu kankana kai bale || Totta kubusa bigidutta peetaambara | Ghatti odyaana kaalandige ruligejje | Battili polevudu mentike kirupille | Ittu shobhi…