Haridasa Sahitya — Vyasadasa
Shobhanave idhu shobhanave
ಶೋಭನವೇ ಇದು ಶೋಭನವೇ
Composer: Purandara Dasaru · Deity: Hari · Genre: Bhakti
Kannada lyrics
ಶೋಭನವೇ ಇದು ಶೋಭನವೇ ||ಪ|| ವೈಭವವೇ ನಮ್ಮ ವಾಮನಮೂರ್ತಿಗೆ || ಪಾಲುಗಡಲು ಮನೆಯಾಗಿರಲು ಆಲದೆಲೆಯ ಮೇಲೆ ಮಲಗುವರೆ ಮೂರ್ಲೋಕವ ನಿನ್ನುದರದೊಳಿಂಬಿಟ್ಟು ಮುದ್ದು- ಬಾಲಕನಾಗಿ ಎತ್ತಿಸಿಕೊಂಬರೆ || ಸಿರಿ ನಿನ್ನ ಕೈವಶವಾಗಿರಲು ತಿರಿವರೆ ಬಲಿಯ ದಾನವ ಬೇಡಿ ಸರಸಿಜಭವ ನಿನ್ನ ಪೂಜೆ ಮಾಡುತಲಿರೆ ನರನ ಬಂಡಿಯ ಬೋವನಾಗುವರೆ || ಕಮ್ಮಗೋಲನ ಪಿತನಾಗಿರಲು ಸುಮ್ಮನೆ ಕುಬುಜೆಗೆ ಸೋಲುವರೆ ಬೊಮ್ಮ ಮೂರುತಿ ನಿನಗೆಣೆಯುಂಟೆ ತ್ರಿಜಗದಿ ಹಮ್ಮಿನ ದೇವ ಪುರಂದರವಿಠಲ ||
Transliteration
Shobhanave idhu shobhanave Vaibhavave Namma Vamana Murthige Charana Palagadalu Maneyagiralu | Aaladeya Mele Malaguvare ||1|| Muurlokava Ninudardolimbittu | Muddu Balakanagi Yettisikombare ||2|| Siri Ninna Kaivashavagiralu | Tirivare Baliya Danava Bedi ||3|| Sarasijabhava Nimma Puje Madutalire| Narana Bandiya Bovanaaguvare ||4|| Kammugolana Pitanagiralu | Summane Kuchijege Soluvare ||5|| Bomma Muru…