Haridasa Sahitya — Vyasadasa
Shobana shobhanave(Purandara dasaru)
ಶೋಭಾನ ಶೋಭಾನವೆ
Composer: Purandara Dasaru · Deity: Hari · Genre: Bhakti
Kannada lyrics
ಶೋಭಾನ ಶೋಭಾನವೆ ||pa|| ಭೂದೇವಿಯರಸ ವೆಂಕಟರಾಯಗೆ ಶೋಭಾನ ಶೋಭಾನವೆ ||a.pa|| ಅಂದು ಕ್ಷೀರಾಂಬುನಿಧಿ ಮೊದಲಾಗಿ ಇಂದಿರೆ ಹರುಷದಿಂದುದಿಸಿ ಬಂದು ಕಂದರ್ಪ ಕೋಟಿ ಲಾವಣ್ಯಮೂರುತಿಯಾದ ಮಂದಾರಮಾಲೆಯ ಹಾಕಿದ ದೇವಗೆ ||1|| ಜನಕನ ಮನೆಯಲ್ಲಿ ರಾಜಾಧಿರಾಜರು ಎಣಿಕೆಯಿಲ್ಲದಲೆ ಬರುತಿರಲು ಸನಕಾದಿವಂದ್ಯನ ಕಂಡು ಸಂತೋಷದಿ ಜಾನಕಿ ಮಾಲೆಯ ಹಾಕಿದ ರಾಮಗೆ ||2|| ರುಕುಮನು ಶಿಶುಪಾಲಗನುಜೆಯೀಯುವನೆಂದು ಸಕಲರಾಯರಲ್ಲಿ ಬಂದಿರಲಾಗಿ ಭಕುತವತ್ಸಲನನ್ನು ಕಂಡು ಸಂತೋಷದಿ ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ ||3|| ಸತ್ಯಭಾಮೆಯು ನೀಲೆ ಭದ್ರೆ ಕಾಳಿಂದಿಯು ಮಿತ್ರವಿಂದೆಯು ಲಕ್ಷಣೆಯು ಜಾಂಬವತಿ ಮತ್ತೆ ಆ ಸೋಳಸಾಹಸ್ರಕನ್ನಿಕೆಯರ ಪ್ರತ್ಯಕ್ಷವಾಳಿದ…
Transliteration
SOBAna SOBAnave ||pa|| BUdEviyarasa venkaTarAyage SOBAna SOBAnave ||a.pa|| andu kShIrAMbunidhi modalAgi indire haruShadindudisi bandu kandarpa kOTi lAvaNyamUrutiyAda mandAramAleya hAkida dEvage ||1|| janakana maneyalli rAjAdhirAjaru eNikeyilladale barutiralu sanakAdivandyana kanDu santOShadi jAnaki mAleya hAkida rAmage ||2|| rukumanu SiSupAlaganujeyIyuvanendu sakalarAyaralli bandiralAgi Bakutavats…