Haridasa Sahitya — Vyasadasa

Shivane naa ninna sevakanayyaa

ಶಿವನೇ ನಾ ನಿನ್ನ ಸೇವಕನಯ್ಯಾ

Composer: Sreedavitthala Dasaru · Deity: Shiva / Rudra Devaru · Genre: Bhakti

Kannada lyrics

ಶಿವನೇ ನಾ ನಿನ್ನ ಸೇವಕನಯ್ಯಾ ಕರುಣದಿ ಪಿಡಿ ಕೈಯ್ಯಾ ಶಿರಿಧರನರಮಯ್ಯ || ಪ || ಭವಮೋಚಕ ಭಾಗವತಶಾಸ್ತ್ರವನು ಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ || ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ ಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬ ವೈಕಲ್ಯಾಸ್ಪದವ ಕಳೆದೊಮ್ಮಿಗೆ ವೈಕುಂಠಕೆ ಕರೆದೊಯ್ಯೊ ಕರಿಗೊರಳಾ || ೧ || ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವ ಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವ ಕೃತ್ತಿವಾಸ ಎನ್ನತ್ಯಪರಾಧಗ ಳೆತ್ತಿಣಿಸದೆ ಕೃತಕೃತ್ಯನ ಮಾಡೈ || ೨ || ಗಂಗಾಧರ ಷಣ್ಮುಖಗಣಪರ ತಾತ ತ್ರೈಲೋಕ್ಯತ್ರಾತ ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ ತುಂಗಮಹಿಮ ನಿಸ್ಸಂಗ ಹರಿಯ ದ್ವಿತಿ…

Transliteration

Bhava mochaka bhagavat shaastrava | Avaneeshage peldava neenallave Shivane naa ninna sevakanayyaa || pa || Durmana bidisayyaa | durmana bidisayyaa | Shivane naa ninna sevakanayyaa || a. Pa. || Vaikaarika taijasa taamasavemba traitattwagalemba | Saakaari shaarvari dhava dhara saamba | Surapaadyara bimba surapaadyara bimba || Vaikalyaaspadavaa kaledommege | Vaikunthake karedoyyi karigoralaa || 1 ||…