Haridasa Sahitya — Vyasadasa

Shiva raama Mahamahima

ಶಿವರಾಮಾ ಮಹಾಮಹಿಮ.

Composer: Prasanna Venkata Dasaru · Deity: Vishnu · Genre: Dasara Pada

Kannada lyrics

ಶಿವರಾಮಾ ಮಹಾಮಹಿಮ. ||ಪ|| ಭುವನಗಿರಿ ರಾಮೇಶ್ವರಧಾಮ ||ಅಪ|| ಮಾರಜನಕನ ಮಹಿಮೆ ಸಾರಲು ತ್ವರದಿ ಶುಕಮುನಿಯಾಗಿ ಬರಲು ಗುರುವೆನಿಸಿದಿ ಹರಿಮತದವರೊಳು ಪರಗತಿ ಸಾಧನ ದಾರಿಯ ತೋರಲು ||೧|| ಭುಂಜಿಸಿ ವಷ ನಂಜುಂಡನೆನೆನಿಸಿದಿ ಕೆಂಜಡೆಯಲಿ ನಂದಿನಿಯ ರಂಜಿಸಿ ವಂಜೀರರ ಭವಭಂಜಕ ನಮ್ಮ ಕಂಜನಾಭ ಪದಕಂಜ ತೋರುವ. ||೨|| ಜಪ ತಪ ನೇಮಾಬೇಕಿಲ್ಲ ನೀಪ್ರಕಟನಾಗುವಿ ನಂಬುವಗೆಲ್ಲ ಅಪತ್ತಿಗೊದಗುವ ಘಟಿತಾಘಟಿತಬಲ ಶ್ರೀ ಪ್ರಸನ್ನವೆಂಕಟ ನಿನ್ನೊಳಗಿಹನಲ್ಲ. ||೩||

Transliteration

SivarAmA mahAmahima. ||pa|| Buvanagiri rAmESvaradhAma ||apa|| mArajanakana mahime sAralu tvaradi SukamuniyAgi baralu guruvenisidi harimatadavaroLu paragati sAdhana dAriya tOralu ||1|| Bunjisi vaSha nanjunDanenenisidi kenjaDeyali nandiniya ranjisi vanjIrara BavaBanjaka namma kanjanABa padakanja tOruva. ||2|| japa tapa nEmAbEkilla nIprakaTanAguvi naMbuvagella apattigodaguva GaTitAGaTitabala SrI pras…