Haridasa Sahitya — Vyasadasa

Sevakatanada ruci yenaridyo

ಸೇವಕತನದ ರುಚಿಯೇನರಿದ್ಯೋ |

Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಸೇವಕತನದ ರುಚಿಯೇನರಿದ್ಯೋ | ದೇವ ಹನುಮರಾಯ | ವೈರಾಗ್ಯ ಬೇಡಿದೆ ||ಪಲ್ಲವಿ|| ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ ಮದುವೆಯ ಮಾಡೆನ್ನಬಾರದಿತ್ತೇ ಪದದಿ ಪಾಷಾಣವ ಪೆಣ್ಣ ಮಾಡಿದವಗೆ ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೧|| ಕ್ಷಣದಲಿ ಸಂಜೀವನ ಗಿರಿ ತಂದಾಗ ಹಣ ಹೊನ್ನು ಬೇಡಲು ಕೊಡದಿದ್ದನೇ ರಾಮ ವಿನಯಿ ವಿಭೀಷಣನಿಗೆ ರಾಜ್ಯವಿತ್ತವನಿಗೆ ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೨|| ಸಾರ್ವಭೌಮನು ಮೆಚ್ಚಿದಾಗಲೆ ನೀ ಪೋಗಿ ಉರ್ವಿಯ ಬೇಡಲು ಕೊಡದಿದ್ದನೇ ರಾಮ ಸರ್ವವ ತೊರೆದು ಶ್ರೀ ಪುರಂದರ ವಿಠಲನ ನಿರ್ವ್ಯಾಜ ಸೇವೆಯ ಬೇಡಿದೆಯೋ ಹನುಮ ||೩||

Transliteration

Sevakatanada ruciyenaridyo | Deva hanumaraya | vairagya bedide ||pallavi|| Udadhiya dati siteya kshema tandaga Maduveya madennabaraditte Padadi pashanava penna madidavage Idu enasadhyavo hanuma ninollade ||1|| Kshanadali sanjivana giri tandaga Hana honnu bedalu kodadiddane rama Vinayi vibishananige rajyavittavanige Idu enasadhyavo hanuma ninollade ||2|| Sarvabaumanu meccidagale ni pogi Urviya beda…