Haridasa Sahitya — Vyasadasa
Satyavantharigidu kaala illa
ಸತ್ಯವಂತರಿಗಿದು ಕಾಲವಲ್ಲ
Composer: Purandara Dasaru · Deity: Hari · Genre: Philosophy
Kannada lyrics
ಸತ್ಯವಂತರಿಗಿದು ಕಾಲವಲ್ಲ ||ಪ|| ದುಷ್ಟಜನರಿಗೆ ಸುಭಿಕ್ಷಕಾಲ || ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ ಪರಮಪಾಪಿಗಳಿಗೆ ಸುಭಿಕ್ಷಕಾಲ ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ ಧರೆಗೆ ಜಾರೆಯಳ ಕೊಂಡಾಡುವ ಕಾಲ || ಉಪಕಾರಮಾಡಿದರೆ ಅಪಕರಿಸುವ ಕಾಲ ಸಕಲವು ತಿಳಿದವಗೆ ದುರ್ಭಿಕ್ಷಕಾಲ ಪತಿಸುತರು ಎಂಬವರ ನಂಬಲರಿಯದ ಕಾಲ ಸಟೆಯಲ್ಲವಿದೆ ವಿಪರೀತ ಕಾಲ || ಧರ್ಮವ ಮಾಡುವಗೆ ನಿರ್ಮೂಲವಾಗುವ ಕಾಲ ಕರ್ಮಿಪಾತಕರಿಗೆ ಬಹುಸೌಖ್ಯಕಾಲ ನಿರ್ಮಲಾತ್ಮಕ ಸಿರಿಪುರಂದರವಿಠಲನ ಮರ್ಮದೊಳು ಭಜಿಸಲರಿಯದ ಕಾಲವಯ್ಯ ||
Transliteration
Satyavantharigidu kaala illa Dushtajanarige Subhikshakaala|| Harismarane Maaduvage Kshayavaguva Kaala Parama Paapigalige Subhikshakaala Sthiravaada Pativrateya Pararu Nindipa Kaala Dharege Jaareyala Kondaaduva Kaala||1|| Upakaara Maadidare Apakarisuva Kaala Sakalavu Tilidavage Durbhiksha Kaala Patisutaru Embavara Nambalariyada Kaala Sateyallavide Vipareeta Kaala||2|| Dharma Maaduvage Nirmulavaaguv…