Haridasa Sahitya — Vyasadasa
Satyavantara sangaviralu
ಸತ್ಯವಂತರ ಸಂಗವಿರಲು
Composer: Kanakadasaru · Deity: Hari · Genre: Philosophy
Kannada lyrics
ಸತ್ಯವಂತರ ಸಂಗವಿರಲು ತೀರ್ಥವೇತಕೆ ನಿತ್ಯ ಅನ್ನದಾನವಿರಲು ಭಯವು ಏತಕೆ ।।ಪ॥ ಗುರುಹಿರಿಯರ ಅರಿಯದವನ ಅರಿವದೇತಕೆ ಪರಹಿತಾರ್ಥಕಿಲ್ಲದವನ ಶರೀರವೇತಕೆ ಹರಿಯ ಪೂಜೆ ಮಾಡದವನ ಜನುಮವೇತಕೆ ಸೇರಿದವರ ಹೊರೆಯದಂಥ ದೊರೆಯು ಏತಕೆ ।।೧।। ಮಾತು ಕೇಳದೆ ಮಲೆತು ನಡೆವ ಮಕ್ಕಳೇತಕೆ ಭೀತನಾಗಿ ಓಡಿಬರುವ ಬಂಟಾನೇತಕೆ ಪ್ರೀತಿ ಇಲ್ಲದೆ ಎಡೆಯನಲಿಕ್ಕಿದ ಊಟವೇತಕೆ ಸೋತು ಹೆಣ್ಣಿಗೆ ಹೆದರಿ ನಡೆಯದ ಸುಗುಣನೇತಕೆ ।।೨।। ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ ಮಾನ ಹೀನನಾಗಿ ಬಾಳ್ವ ಮನುಜನೇತಕೆ ನುಣ ಹೆಚ್ಚು ನೋಡುವಲ್ಲಿ ಇರುವುದೇತಕೆ ತನ್ನ ಬಳಗವೆರಸಿ ಉಣ್ಣದ ಭಾಗ್ಯವೇತಕೆ ।।೩।। ತಾನು ತನ್ನನರಿಯದಂಥ ಪ್ರೌಢನೇತಕೆ ಸ್ನಾನ ಸಂಧ್ಯಾನವಿಲ್ಲದ ಶೀಲ…
Transliteration
Satyavantara sangaviralu tirthavetake Nitya annadanaviralu Bayavu Etake ||pa|| Guruhiriyara ariyadavana arivadetake Parahitarthakilladavana sariravetake Hariya puje madadavana janumavetake Seridavara horeyadantha doreyu Etake ||1|| Matu kelade maletu nadeva makkaletake Bitanagi odibaruva bantanetake Priti illade edeyanalikkida utavetake Sotu hennige hedari nadeyada sugunanetake ||2|| Tanu unnada p…