Haridasa Sahitya — Vyasadasa

Sathatha Gananatha siddhiya

ಸತತ ಗನನಾಥ ಸಿದ್ಧಿಯನಿವ ಕಾರ್ಯದಲಿ

Composer: Purandara Dasaru · Deity: Vishnu · Genre: Dasara Pada

Kannada lyrics

ಸತತ ಗಣನಾಥ ಸಿದ್ಧಿಯ ನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿ ದೇವಿಯು ।।ಪ || ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು ಭಕುತಿ ದಾಯಕಳು ಶ್ರೀ ಭಾರತಿದೇವಿ ।।೧।। ಯುಕುತಿ ಶಾಸ್ತ್ರಗಳ್ಲಲಿ ವನಜಸಂಭವನರಸಿ ಸತ್ಕರ್ಮಗಳ ನಡೆಸಿ ಸುಜ್ಞಾನ ಇತ್ತು ಮತಿ ಪಾಲಿಸುವ ನಮ್ಮ ಪವಮಾನನು ।।೨।। ಚಿತ್ತದಲ್ಲಿ ಆನಂದ ಸುಖವ ನೀವಳು ರಮಾ ಮುಕುತಿ ಪ್ರದಾಯಕ ಶ್ರೀ ಪುರಂದರ ವಿಠಲನು ಸತತ ಇವರಲ್ಲಿ ನಿಂತು ಈ ಕೃತಿಯ ನಡೆಸುವನು ।।೩।।

Transliteration

Satata gananaatha siddhiyaniva kaaryadali mati prerisuvalu paarvatidevi mu- kutipathake manaviva maharudradevaru hari bha- kutidaayakalu bhaaratidevi yu- kuti shaastragalalli vanajasambhavanarasi satkarmagala nadesi suj~jaana matiyittu gati paalisuva namma pavamaananu chittadali ananda sukavanivalu ramaa bha- kutajanarodeya namma purandaravitthalanu satata ivarolu nintu I krutiya nadesuvanu |