Haridasa Sahitya — Vyasadasa
Satata paliso enna yati ragavendra
ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರಾ
Composer: Haridasa · Deity: Raghavendra Teertharu · Genre: Dasara Pada
Kannada lyrics
ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರಾ | ಪತಿತ ಪಾವನ ಪವನಸುತ ಮತಾಂಬುಧಿ ಚಂದ್ರಾ || ಅ.ಪ. || ಕ್ಷೋಣೀಯೊಳಗೆ ಕುಂಭಕೋಣ ಕ್ಷೇತ್ರದಿ ಮೆರೆದೆ | ವೀಣಾವೆಂಕಟ ಅಭಿದಾನಾದಿಂದಾ | ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ | ಏನೆಂದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕಾ | ೧ | ನಂಬಿದೆನೋ ನಿನ್ನ ಪಾದಾಂಬುಜವ ಮನ್ಮನದಿ | ಹಂಬಲ ಪೂರೈಸೋ ಬೆಂಬಿಡದಲೆ | ಕುಂಭಿಣಿ ಸುರ ನಿಕುರುಂಬವಂದಿತ ಜಿತ | ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ | ಮಂದಮತಿಗಳ ಸಂಗದಿಂದ ನಿನ್ನ ಪಾದ | ಇಂದಿನತನಕ ನಾ ಪೊಂದಲಿಲ್ಲಾ | ಕುಂದು ಎಣಿಸದೇ ಕಾಯೋ ಕಂದರ್ಪ ಪಿತ | ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |
Transliteration
satata paliso enna yati ragavendra | patita pavana pavanasuta matambudhi camdra | a.pa. | kshoniyolage kumbakona kshetradi merede | vinavenkata abidanadinda | sanuragadi dvijana prana ulisida mahime | enemdu bannisali j~janigala kulatilaka | 1 | nambideno ninna padambujava manmanadi | hambala puraiso bembidadale | kumbini sura nikurumbavandita jita | sambarantaka sata kumba kasyapa tanaya | 2 | ma…