Haridasa Sahitya — Vyasadasa
Sariyarai jayamuni sariyarai
ಸರಿಯಾರೈ ಜಯಮುನಿ ಸಮರಾರೈ
Composer: Haridasa · Deity: Jayateertharu · Genre: Dasara Pada
Kannada lyrics
ಸರಿಯಾರೈ ಜಯಮುನಿ ಸಮರಾರೈ ಗುರುಮಧ್ವಕೃತಿ ವಿವೃತಿ ರಚಿಸುವಲ್ಲಿ ||pa|| ವರ್ಣವಂದಾರು ಬಿಡದಲೆ ಬಹುಫಲ ವರ್ಣಿಪೆ ಲೋಭದಿ ಶರಣ ಜನರಿಗೆ ಕರ್ಣಸುಧಾರಸ ಬೆರೆದು ನೀ ಬಲುಗೂಢ ಪೂರ್ಣಮತಿ ಭಾವವ ತೆಗೆವತಿ ಶೂರ ||1|| ಒಂದೊಂದು ವಚನವ ಹಿಂದಾಗಿ ಮುಂದಾಗಿ ಛಂದಾಗಿ ತಿರಿಗಿಸಿ ತಿರೆಯ ಸಿಂಧುರದಂತೆ ಬಂದಿಸಿ ಮುಂದಾಗಿ ಬಂದು ದುರ್ವಾದಿಯ ಸಂದುಗಳನೆ ಸೀಳಿ ಮೆರೆದತಿ ಶೂರ ||2|| ಕತ್ತಿಯ ಒಂದೇ ಹಿಡದೆ ಬಿಡದಲೆವೆ ಹತ್ತು ದಿಕ್ಕಿಗೆ ತಿರಿಗಿಪ್ಪ ವೀರನ ತೆರೆ ಅತ್ಯರ್ಥ ಮೂಲದ ಹಿಡಿದು ಅದನ್ನು ಸುತ್ತಿಸಿ ವಿಮತರ ತತ್ತರಿಸುವ ಧೀರ||3|| ಮೂಲ ವಚನಗಳ ಕಲ್ಪಲತೆಯ ಮಾಡಿ ಮೇಲಾದ ತತ್ವಗಳೆಂಬೊ ಫಲಗಳು ಶೀಲಮತಿಗಳುಳ್ಳ ಶಿಷ್ಯ ಶಿಶುವಿಗಳಿ ಗಾಲಿಸಿ ಮ…
Transliteration
sariyArai jayamuni samarArai gurumadhvakRuti vivRuti racisuvalli ||pa|| varNavandAru biDadale bahuPala varNipe lOBadi SaraNa janarige karNasudhArasa beredu nI balugUDha pUrNamati BAvava tegevati SUra ||1|| ondondu vacanava hindAgi mundAgi CandAgi tirigisi tireya sindhuradante bandisi mundAgi bandu durvAdiya sandugaLane sILi meredati SUra ||2|| kattiya ondE hiDade biDadaleve hattu dikkige tirigippa…