Haridasa Sahitya — Vyasadasa
Sari bandane
ಸಾರಿ ಬಂದನೆ
Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ || ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು ಧೀರನು ವಯ್ಯಾರದಿಂದ || ಅನು ಪಲ್ಲವಿ || ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ || ಭೀಮಸೇನನೆ ಕುಂತಿ ತನಯನೆ ವಿರಾಟನ ಮನೆಯಲ್ಲಿ ನಿಂತು ಕೀಚಕನ ಸಂಹರಿಸಿದವನೆ || ೨ || ಮಧ್ವರಾಯನೆ ಸರ್ವಜ್ಞಶ್ರೇಷ್ಠ ಅದ್ವೈತವ ಗೆದ್ದು ಪುರಂದರವಿಠಲನ ಮುಂದೆ ನಿಂತವನೆ || ೩ ||
Transliteration
Sari bandane | pranesa bandane || Sari bandu lankapurava mirida ravanana | ¸ Kandu dhira oyyaradimda|| Vayuputrane sriramadutane | Pritiyinda sitanganege mudrikeya tandittavane || Bimasenane kunti tanayane Viratana maneyali nintu kicakana samharisidavane || Madhvarayane sarvaj~ja sreshthane | Advaitava geddu purandaravithalana munde||