Haridasa Sahitya — Vyasadasa

Saranu sri guru raghavenrage

ಶರಣು ಶ್ರೀ ಗುರುರಾಘವೇಂದ್ರಗೆ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ಶರಣು ಶ್ರೀ ಗುರುರಾಘವೇಂದ್ರಗೆ ಶರಣು ಯತಿಕುಲತಿಲಕಗೆ || ಪ || ಶರಣು ಶರಣರ ಪೊರೆವ ಕರುಣಿಗೆ ಶರಣು ಹರಿಗುಣ ಲೋಲಗೆ || ಅ || ಮಧ್ವಮತ ಶುಭವಾರುಧಿಚಂದ್ರಗೆ ಸಿಧ್ಧಸಾಧನಮೂರ್ತಿಗೆ ಬಧ್ಧ ಶ್ರೀಹರಿದ್ವೇಷಿ ಮಾಯ್ಗಳ ಗೆದ್ದ ರಘುಕುಲ ರಾಮದೂತಗೆ – ಶರಣು || ೧ || ನಿತ್ಯನಿರ್ಮಲ ಪುಣ್ಯಗಾತ್ರಗೆ ಭೃತ್ಯಪಾಲಕ ಸುಗುಣಪಾತ್ರಗೆ ಸತ್ಯ ಜ್ಞಾನ ಸುಮೋದ ನೇತ್ರಗೆ ಸ್ತುತ್ಯ ಯತಿವರ ಸುಜನಮಿತ್ರಗೆ – ಶರಣು || ೨ || ಮೋದದಾಯಕ ಭೇದಸಾಧಕ ಮೇದಿನಿಸುರಜಾಲನಾಯಕ ಮೋದತೀರ್ಥರ ಚರಣಸೇವಕ ಆದಿ ಗುರುಜಗನ್ನಾಥವಿಠ್ಠಲ ದೂತಗೆ – ಶರಣು || ೩ ||

Transliteration

Saranu sri gururagavendrage Saranu yatikulatilakage || pa || Saranu saranara poreva karunige Saranu hariguna lolage || a || Madhvamata subavarudhicandrage Sidhdhasadhanamurtige Badhdha sriharidveshi maygala Gedda ragukula ramadutage – saranu || 1 || Nityanirmala punyagatrage Brutyapalaka sugunapatrage Satya j~jana sumoda netrage Stutya yativara sujanamitrage – saranu || 2 || Modadayaka bedasadhaka…