Haridasa Sahitya — Vyasadasa
Saranu sakaloddhara
ಶರಣು ಸಕಲೋದ್ಧಾರ
Composer: Purandara Dasaru · Deity: Rama · Genre: Bhakti
Kannada lyrics
ಶರಣು ಸಕಲೋದ್ಧಾರ ಅಸುರ ಕುಲ ಸಂಹಾರ ಶರಣು ದಶರಥ ಬಾಲ ಜಾನಕೀಲೋಲ ||ಪ|| ಈ ಮುದ್ದು ಈ ಮುಖವು ಈ ತನುವಿನಾ ಕಾಂತಿ ಈ ಬಿಲ್ಲು ಈ ಬಾಣ ಈ ನಿಂತ ಈ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಯಾವ ದೇವರಿಗೆ ಉಂಟು ಮೂರುಲೋಕದೊಳಗೆ ||೧|| ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂ ದೊಡ್ಡ ನವರತ್ನದ ಆಭರಣ ಇರಲು ಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವ ಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ ||೨|| ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸ ಬೇಡಿದ ಇಷ್ಟಾರ್ಥಗಳ ಕೊಡುವೆನೆನುತ ಭಾವ ಶುದ್ಧಿಯುಳ್ಳ ತನ್ನ ಭಕುತರ ಪೊರೆವ ಪುರಂದರ ವಿಟ್ಟಲನೆ ಅಯೋಧ್ಯ ರಾಮ ||೩||
Transliteration
Saranu sakaloddhara asura kula samhara Saranu dasaratha bala janakilola ||pa|| I muddu I mukavu I tanuvina kanti I billu I bana I nimta I bava I tamma I site I bamta I bagya Yava devarige umtu murulokadolage ||1|| Utta pitambaravu udigejje manikavu Dodda navaratnada abarana iralu Kotta bashege tappa nijabaktarige oliva Srushtiyolage kane kausalyarama ||2|| Palisalu ayodhya pattanadalli puravasa Be…