Haridasa Sahitya — Vyasadasa

Saranu bharatidevige

ಶರಣು ಭಾರತಿದೇವಿಗೆ

Composer: Purandara Dasaru · Deity: Bharati Devi · Genre: Bhakti

Kannada lyrics

ಶರಣು ಭಾರತಿದೇವಿಗೆ ಶರಣು ವಾಯುರಮಣಿಗೆ ||ಪ|| ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ||ಅ.ಪ|| ಸುರರು ಮೊದಲಾದವರಿಗೆಲ್ಲ ಪರಮ ಮಂಗಳವೀವಳೆ ಚರಣಕಮಲಕೆ ಮೊರೆಯ ಹೊಕ್ಕೆನು ಕರುಣಿಸೆನಗೆ ಸುಮಂಗಳ ಪಿಂಗಳರೂಪಳೆ ಮಂಗಳಮಹಿಮಳೆ ಹಿಂಗದೆ ಕೊಡು ಹರಿಭಕುತಿಯ ರಂಗನಾ ಪದಾಬ್ಜ ಭೃಂಗಳೆ ಸಂಗೀತಕ್ಕೆ ಬಹುಪ್ರಿಯಳೆ ಪಕ್ಷಿವಾಹನ ಲಕ್ಷ್ಮಿರಮಣನ ದಕ್ಷ ಪುರಂದರವಿಠಲನ ಅಕ್ಷಯದಿಂದಲಿ ಭಜಿಸುವಲೆ ರಕ್ಷಿಸೆನ್ನನು ಅನುದಿನ

Transliteration

Saranu bharatidevige Saranu vayuramanige ||pa|| Saranu saranara poreva karunige Saranu suravara devige ||a.pa|| Suraru modaladavarigella Parama mangalavivale Caranakamalake moreya hokkenu Karunisenage sumangala Pingalarupale mangalamahimale Hingade kodu haribakutiya Rangana padabja brungale Sangitakke bahupriyale Pakshivahana lakshmiramanana Daksha purandaravithalana Akshayadindali Bajisuvale Raks…