Haridasa Sahitya — Vyasadasa
Saradeye karunavaridhiye
ಶಾರದೆಯೇ ಕರುಣಾವಾರಿಧಿಯೇ
Composer: Vijaya Dasaru · Deity: Saraswati Devi · Genre: Bhakti
Kannada lyrics
ಶಾರದೆಯೇ ಕರುಣಾವಾರಿಧಿಯೇ ||pa|| ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||a.pa|| ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನ ಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||1|| ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆ ಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ||2|| ಅಜನ ಪಟ್ಟದ ರಾಣಿ ಅಬುಜ ಪಲ್ಲವ ಪಾಣಿ ವಿಜಯವಿಠ್ಠಲನ ಸೊಸೆ ಮುದ್ದುವಾಣಿಯೆ ||3||
Transliteration
Saradeye karunavaridhiye ||pa|| Saramsa vacanakottu salahu ennanu taye ||a.pa|| Candra kirana polvale jagadambe nanu ninna Kanda ennamatige sakaravagiru embe ||1|| Sarasiruhadala netre samajakke samayatre Paramapavana caritre ni gati jagake mitre ||2|| Ajana pattada rani abuja pallava pani Vijayaviththalana sose mudduvaniye ||3||