Haridasa Sahitya — Vyasadasa

Santarana smarisi janaru

ಸಂತರನ ಸ್ಮರಿಸಿ ಜನರು

Composer: Vijaya Dasaru · Deity: Hari · Genre: Guru Parampara

Kannada lyrics

ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ||pa|| ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಲೇಸು ಪಂಕಜನಾಭ ನರಹರಿ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ಭಾಸುರ ವಿದ್ಯಾನಿಧಿ ರಘುನಾಥ ರಘುವರ್ಯ ಭೂಷಣ ಮತಕೆ ರಘೋತ್ತಮ ನಿಧಿವೇದ ವ್ಯಾಸ ವಿದ್ಯಾಧೀಶರೂ ||1|| ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ ನೋದ ಸತ್ಯಪ್ರಿಯರೂ ಭೇದಾರ್ಥ ಬಲ್ಲ ವಿಭುಧೇಂದ್ರ…

Transliteration

santarana smarisi janaru santarana smarisi jana nintalli kuLitalli intentu saddharma carisuva kAlakke antarangadaliddu chinteyanu biTTu siri kuntupitanolimeyinda ||pa|| vyAsa SiShyarAda gurumadhva munirAya lEsu pankajanABa narahari mAdhava mu nESa akShOBya jayarAya vidyAdhirAja pOShita kavEendratIrtharA nyASi vAgISa yati rAmachandra nanda BAsura vidyAnidhi raGhunAtha raGhuvarya BUShaNa matake raGh…