Haridasa Sahitya — Vyasadasa

Sambo sura Ganaadarane

ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ

Composer: Haridasa · Deity: Shiva / Rudra Devaru · Genre: Dasara Pada

Kannada lyrics

ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ ಲಿಂಗ ||pa|| ರಂಭ ಜನಕ ಕರುಣಾಂಬುಧಿ ಗುರುವರ ||a.pa|| ಮುರಾರಿ ಮಹದೇವ ನಿನ್ನಯ ಪಾದ ವಾರಿಜದಳಯುಗವ ಸಾರಿದೆ ಸತತ ಸರೋರುಹೇಕ್ಷಣ ಹೃ ದ್ವಾರಿಜದೊಳು ತೋರು ಗಾರುಮಾಡದಲೆನ್ನ ಅಮಿತ ಗುಣಗುಣ ವಾರಿನಿಧಿ ವಿಗತಾಘ ವ್ಯಾಳಾ ಗಾರ ವಿತ್ತಪ ಮಿತ್ರ ಸುಭಗ ಶ ಪಾವಕ ||1|| ಇಂದು ಮೌಳೀ ಈಪ್ಸಿತಫಲ ಸಲಿಸುವ ಘನತ್ರಿಶೂಲೀ ಸಲೆ ನಂಬಿದೆನೊ ಹಾಲಾ ಹಲಕಂಠ ಎನ್ನ ನೀ ಸಲಹೋ ಸಂತತ ರೌಪ್ಯಾಚಲವಾಸ ವರಪಂಪಾ ನಿರ್ಜರ ಸೇವಿತಾನಲ ನಳಿನಸಖ ಸೋಮೇಕ್ಷಣನೆ ಬಾಂ ದಳಪುರಾಂತಕ ನಿಜಶರಣವ ತ್ಸಲ ವೃಷಾರೋಹಣ ವಿಬುಧವರ ||2|| ದೃತಡಮರುಗ ಸಾರಂಗ ನಿನ್ನಯಪಾದ ಶತಪತ್ರಾರ್ಚಿಪರ ಸಂಗ ಸತತ ಪಾಲಿಸೊ ಜಗನ್ನಾಥ ವಿಠ್ಠಲನ ಸ ನ್ನುತಿಸ…

Transliteration

raMBa janaka karuNAMbudhi guruvara ||a.pa|| murAri mahadEva ninnaya pAda vArijadaLayugava sAride satata sarOruhEkShaNa hRu dvArijadoLu tOru gArumADadalenna amita guNaguNa vArinidhi vigatAGa vyALA gAra vittapa mitra suBaga Sa pAvaka ||1|| indu mauLI IpsitaPala salisuva GanatriSUlI sale naMbideno hAlA halakanTha enna nI salahO santata raupyAcalavAsa varapaMpA nirjara sEvitAnala naLinasaKa sOmEkShaNa…