Haridasa Sahitya — Vyasadasa
Samarpana song(Madhwesharpanamasthu)
ಸಮರ್ಪಣಾ ಹಾಡು (ಮಧ್ವೇಶಾರ್ಪಣಮಸ್ತು)
Composer: Panduranga Huchchaacharya/Indiresha Dasaru · Deity: Vishnu · Genre: Miscellaneous
Kannada lyrics
ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತು ನಿಂದು ಕರಂಗಳ ವಂದಿಸಿ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು || ಅಂಬುಜನಾಭನ ನಿತಂಬಿನಿ ಕಮಲಕೆ ಮಧ್ವೇಶಾರ್ಪಣ ಮಸ್ತು ಡಿಂಗರಿಗನು ನಾಜಗದಂಟೆಯ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು|| ಸಂಧ್ಯಾದೇವಿಗೆ ವಂದಿಸುತಿರುವೆನು ಮಧ್ವೇಶಾರ್ಪಣಮಸ್ತು ಒಂದಿನ ಬಿಡದೆ ತ್ರಿಕಾಲದಿ ಮಧ್ವೇಶಾರ್ಪಣಮಸ್ತು || ಚಾಮರ ಹಾಕುವೆ ಶ್ರೀಮನೋಹರಗೆ ಮಧ್ವೇಶಾರ್ಪಣಮಸ್ತು ಕೋಮಲ ಶಯನದಿ ಮಲಗಿಸುವೆನು ಮಧ್ವೇಶಾರ್ಪಣಮಸ್ತು || ಕೃಷ್ಣನ ಮಲಗಿಸಿ ತೊಟ್ಟಿಲ ತೂಗುವೆ ಮಧ್ವೇಶಾರ್ಪಣಮಸ್ತು ಬಿಟ್ಟು ಅಭಿಮತ ಘಟ್ಟಿಸಿ ಪಾಡುವೆ ಮಧ್ವೇಶಾರ್ಪಣಮಸ್ತು || ಶ್ರೀಪತಿ ತೊಟ್ಟಿಲ ಈ ಪರಿ ತೂಗುವೆ ಮಧ್ವೇಶಾರ್ಪಣಮಸ್ತು ಗುರು ಪು…
Transliteration
Vandisuvenu govimdana charanake madhvesarpanamastu nndu karangala vandisi prarthane madhvesarpanamastu ||2|| Ambujanabana nitambini kamalake madhvesarpanamastu Mattudingariganu najagadanteya prarthane madhvesarpanamastu ||3|| Sandhyadevige vamdisutiruvenu madhvesarpanamastu Ondina bidade trikaladi madhvesarpanamastu||4|| Chamara hakuve srimanoharage madhvesarpanamastu Komala Sayanadi malagisuvenu…