Haridasa Sahitya — Vyasadasa

Samanyavalla sri hariya seve

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ

Composer: Purandara Dasaru · Deity: Hari · Genre: Bhakti

Kannada lyrics

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲ||pa|| ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆ||a.pa|| ಅಂತರ ಮಲಿನವಳಿಯಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತ ಕೇಳಲು ಬೇಕು ಸಂತತವಿರಬೇಕು ಸಂತ ಜನರ ಗುಣ ನಿರಂತರದಲಿ ತಾ ಚಿಂತಿಸಬೇಕು ಜ್ಞಾನ ಕರ್ಮೇಂದ್ರಿಯ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ ಹೀನ ವೃದ್ಧಿಗಳೆರಡಕೆ ತಾ ಸಹಿಸಿ ದೀನತೆಯನು ವಹಿಸಿ ಮಾನಾಪಮಾನ ಸಮಾನವೆಂದರಿತು ನಿಧಾನದಿ ಹರಿ ಗುಣ ಧ್ಯಾನವ ಮಾಳ್ಪುದು ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು ಸ್ವರಮಣನೆಂದು ಸರ್ವಾನುಗ್ರಹನೆಂದು ಸರ್ವ ಮೂರುತಿ ಪುರಂದರ ವಿಟ್ಠಲನ ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು

Transliteration

Samanyavalla sri hariya seve pamara janarige samanyavalla||pa|| Samaja varadana premadi nenevudu tamasa buddhiya ta taggisade||a.pa|| Antara malinavaliyabeku santata sravanadi srikantana carita kelalu beku Santatavirabeku santa janara guna nirantaradali ta cintisabeku J~jana karmendriya nigrahisi j~janava sangrahisi hina vruddhigaleradake ta sahisi Dinateyanu vahisi manapamana samanavemdaritu nidh…