Haridasa Sahitya — Vyasadasa

Sakala graha bala

ಸಕಲಗ್ರಹಬಲ ನೀನೇ ಸರಸಿಜಾಕ್ಷ

Composer: Purandara Dasaru · Deity: Hari · Genre: Bhakti

Kannada lyrics

ಸಕಲಗ್ರಹಬಲ ನೀನೇ ಸರಸಿಜಾಕ್ಷ ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೇ ||ಪ|| ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರುವು ಶನಿಯು ಮಂಗಳನು ನೀನೆ ದಿವ ರಾತ್ರಿಯು ನೀನೆ ನವವಿಧಾನವು ನೀನೆ ಭವರೋಗಹರ ನೀನೆ ಭೇಷಜನು ನೀನೆ ||೧|| ಪಕ್ಷಮಾಸವು ನೀನೆ ಪರ್ವಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣಗಳು ನೀನೆ ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ ಪಕ್ಷಿವಾಹನ ದೀನರಕ್ಷಕನು ನೀನೆ ||೨|| ಋತು ವತ್ಸರವು ನೀನೆ ಪ್ರುಥಿವ್ಯುಗಾದಿಯು ನೀನೆ ಕ್ರತು ಹೋಮ ಯಜ್ಞ ಸದ್ಗತಿಯು ನೀನೆ ಜಿತವಾಗಿ ಎನ್ನೊಡೆಯ ಪುರಂದರವಿಠ್ಠಲನೆ ಶ್ರುತಿಗೆ ಸಿಲುಕದ ಮಹಾಮಹಿಮನು ನೀನೆ ||೩||

Transliteration

Sakala graha bala nine sarasijaksha nikila rakshaka nine visvavyapakane ||pa|| Ravichandra budha nine rahu ketuvu nine Kavi guruvu Saniyu mamgalanu nine Diva ratriyu nine nava vidhanavu nine Bavaroga hara nine beshajanu nine ||1|| Pakshamasavu nine parva kalavu nine Nakshatra yoga tithi karanagalu nine Akshayavendu draupadiya manava kayda Pakshivahana dinarakshakanu nine ||2|| Rutuvatsaravu nine v…