Haridasa Sahitya — Vyasadasa
Sahisalaarene gopi
ಸಹಿಸಲಾರೆನೆ ಗೋಪಿ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ, ಏನೆಂದು ಪೇಳಮ್ಮ ||ಪ || ವಾಸುದೇವನು ಬಂದು ಮೋಸದಿಂದಲಿ ಎನ್ನ ವಾಸವ ಸೆಳಕೊಂಡು ಓಡಿ ಪೋದನಮ್ಮ ||ಅ || ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ ಸಾವಿರ ನುಂಗುವನೆ ಭಾವಜನಯ್ಯ ಇದೇನೆಂದರೆ ನಿಮ್ಮ ಕಾವ ದೇವರು ನಾ ಕೇಳಿಕೋ ಎಂಬನೆ || ಅಗ್ರೋದಕ ತಂದು ಜಗಲಿ ಮೇಲಿಟ್ಟರೆ ವೆಗ್ಗಳದಲಿ ಕುಡಿವ ಮಂಗಳಮಹಿಮನ ಮೀಸಲೆಂದರೆ ನಿಮ್ಮ ಮಂಗಳಮಹಿಮನ ಅಪ್ಪ ನಾನೆಂಬನೆ || ಅಟ್ಟಡುಗೆಯನೆಲ್ಲ ಉಚ್ಚಿಷ್ಟ ಮಾಡಿ ಅಷ್ಟು ತಾ ಬಳಿದುಂಬನೆ ಕೃಷ್ಣದೇವರ ನೈವೇದ್ಯವೆಂದರೆ ನಿಮ್ಮ ಇಷ್ಟ ದೇವರು ತೃಪ್ತನಾದನೆಂತೆಂಬನೆ || ಋತುವಾದ ಬಾಲೆಯರು ಪತಿಯೊಡೆಗೆ ಪೋಪಾಗ ಪಥದೊಳಗಡಗಿರುವ ಮತಿಗೆಟ್ಟ ಹೆಣ್ಣೆ ಸುಂಕವ ಕೊಡು ಎನುತಲಿ…
Transliteration
Sahisalarene gopi ninna magana luti,Enendu pelamma ||pa || Vasudevanu bandu mosadindali enna Vasava selakondu odi podanamma ||a || Devara pettige tegedu saligrama Savira nunguvane Bavajanayya idenendare nimma Kava devaru na keliko embane ||1|| Agrodaka tandu jagali melittare Veggaladali kudiva Mangalamahimana misalendare nimma Mangalamahimana appa nanembane ||2|| Attadugeyanella uccishta madi Asht…