Haridasa Sahitya — Vyasadasa
Sadhanake bageganenennabahude
ಸಾಧನಕೆ ಬಗೆಗಾಣೆನೆನ್ನಬಹುದೆ
Composer: Vijaya Dasaru · Deity: Hari · Genre: Bhakti
Kannada lyrics
ಸಾಧನಕೆ ಬಗೆಗಾಣೆನೆನ್ನಬಹುದೆ ಸಾದರದಿ ಗುರುಕರುಣ ತಾ ಪಡೆದ ಬಳಿಕ || ಪ || ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲ ವಿಷ್ಣುಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯ ನಾಮ || ೧ || ವಾಗತ್ಯಪಡುವುದೆ ವಿಧಿನಿಷೇಧಾಚರಣೆ ರೋಗಾನುಭವವೆಲ್ಲ ಉಗ್ರತಪವು ಆಗದವರಾಡಿಕೊಂಬುದೆ ಆಶೀರ್ವಾದ ಬೀಗರುಪಚಾರವೇ ಭೂತದಯವು || ೨ || ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರ ಕೈಮೀರಿ ಹೋದದ್ದೆ ಕೃಷ್ಣಾರ್ಪಣ ಮೈಮನೋವೃತ್ತಿಗಳೆ ವಿಷಯದಲಿ ವೈರಾಗ್ಯ ಹೊಯ್ಮಾಲಿತನವೆಲ್ಲ ಹರಿಯ ವಿಹಾರ || ೩ || ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ ನಡೆದಾಡುವೋದೆಲ್ಲ ತೀರ್ಥಯಾತ್ರೆ ಬಡತನ ಬರಲದೇ ಭಗವದ್ಭಜನೆಯೋಗ ಸಡಗರ…
Transliteration
Kandakandaddella kamalanabana murti Undu uttaddella vishnupuje Tandatandada varte varijakshana kirti Hindu matugalella hariya nama || 1 || Vagatyapaduvude vidhinishedhacarane Roganubavavella ugratapavu Agadavaradikombude asirvada Bigarupacarave butadayavu || 2 || Maimaretu malaguvude dharanige namaskara Kaimiri hodadde krushnarpana Maimanovruttigale vishayadali vairagya Hoymalitanavella hariya vih…