Haridasa Sahitya — Vyasadasa

Sada enna hrdayadalli

ಸದಾ ಎನ್ನ ಹೃದಯದಲ್ಲಿ

Composer: Vijaya Dasaru · Deity: Hari · Genre: Bhakti

Kannada lyrics

ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀ ಹರಿ ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನೋ ।।ಪ।। ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ ವೇಣುಗಾನ ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ ।।೧।। ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದಿ ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೋ ।।೨।। ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ಘನ ಮಹಿಮ ವಿಜಯವಿಠಲ ನಿನ್ನ ಭಕುತರ ಕೇಳೋ ಸೊಲ್ಲ ।।೩।।

Transliteration

Sada enna hrdayadalli vasamado shri hari Nadamuni ninna pada modadinda bhajisuve Jnanavembo navaratna mantapada madhyadali Ganalolana kullirisi dhyanadinda bhajisuve ||1|| Bhakti rasavembo muddu manikyada arivanadi Muktanaga beku endu muttinarati ettuve ||2|| Ninna nanu biduvanalla enna ninu bidudapalli Pannaga shayana vijayavithala kelo ninna bhaktara solla||3||