Haridasa Sahitya — Vyasadasa
Runa vimochana Suladi
ಋಣ ವಿಮೋಚನ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಧ್ರುವತಾಳ ಋಣದಿಂದ ಕಡೆ ಮಾಡು ಘನ ಮಹಿಮ ಕೃಪೆಯಿಂದ ಎನಗಾರು ಪೊರೆವರಾಧಾರವಿಲ್ಲ ಘಣಿಯ ಮುಂದಾದರೂ ಭಯ ಬೀಳದಿರಲಾಪೆ ಅನಳಗಂಜದೆ ನಿಂದಿರಲಿಬಹುದು ಋಣಭಾರದ ಮುಂದೆ ಎದುರಿಸುವುದು ಶ್ರಮ ತನುವನುಡುಗಿಸಿಕೊಂಡು ತಿರುಗಬೇಕು ಋಣದ ಸೂತಕವು ಜನ್ಮ ಜನ್ಮಾಂತರಕ್ಕೆ ತೊಲಗವು ಆವಾವ ಪರಿ ದುಡಿಯೆ ಋಣದವನು ಪೆಣಕಿಂತಲಿ ಕನಿಷ್ಠ ಅನಿಮಿಷರು ಪೇಳುವರು ಶ್ರುತಿಯಿಂದಲಿ ಋಣ ಭಯಂಕರ ಭೀಮ ವಿಜಯ ವಿಠ್ಠಲರೇಯ ಋಣ ವಿದ್ದವನು ಹೊಲಿಯನೆನಿಸುವನು ||1|| ಮಟ್ಟ ತಾಳ ಜನನಿ ಜನಕ ಮತ್ತೆ ತನುಸಮ್ಮಂಧಿಗಳ ಋಣ ಪೋಗುವದಕ್ಕೆ ತನುಜನಾದವ ಪೋಗಿ ಘನಮಹಿಮ ಫಲ್ಗುಣಿ ಮಳಲು ಮೆಟ್ಟಿ ಗುಣದಿಂದಲಿ ವಿಷ್ಣುವಿನ ಚರಣದಲಿ ಪಿಂಡವನಿಡಲವರ ಋಣ ಮೋಚನವು, ಮನೋಭೀಷ್ಟ ಸಲ್ಲುವುದ…
Transliteration
dhruvatALa RuNadinda kaDe mADu Gana mahima kRupeyinda enagAru porevarAdhAravilla GaNiya mubdAdarU Baya bILadiralApe anaLagabjade niMdiralibahudu RuNaBArada mubde edurisuvudu Srama tanuvanuDugisikobDu tirugabEku RuNada sUtakavu janma janmAbtarakke tolagavu AvAva pari duDiye RuNadavanu peNakintali kaniShTha animiSharu pELuvaru Srutiyibdali RuNa Bayankara BIma vijaya viThThalarEya RuNa viddavanu holi…