Haridasa Sahitya — Vyasadasa

Rukmani vilasa

ಶ್ರೀ ರುಕ್ಮಿಣಿ

Composer: Jagannatha Dasaru · Deity: Vishnu · Genre: Dasara Pada

Kannada lyrics

ಶ್ರೀ ರುಕ್ಮಿಣಿ ವಿಲಾಸ ಫಣಿ ರಾಜ ಶಯನ ರುಕ್ಮಿಣಿದೇವಿಯೊಡಗೂಡಿ ಮಣಿಮಂಚದ ಮೇಲೆ ಕುಳಿತಿರ್ದ| ಕುಳಿತಿರ್ದ ಸಮಯದಲಿ ಅಣಕವಾಡಿದನು ಇನಿತೆಂದು|| ಹೇ ರಾಜಕನ್ನಿಕೆ ಭೂರಮಣ ನಾನಲ್ಲ ವಾರಿಧಿಯೊಳಗಿದ್ದು ಬದುಕುವ| ಬದುಕುವಗೆ ಮರುಳಾದೆ ನಾರದನ ನುಡಿಗೆ ನಳಿನಾಕ್ಷಿ|| ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು ಪಶುಪಾಲಗೊಲಿದೆ ಸುಕುಮಾರಿ| ಸುಕುಮಾರಿ ಎನಲು ಪರವಶಳಾದಾಗ ಮಹಾಲಕ್ಷ್ಮಿ || ಈ ಮಾತ ಕೇಳಿ ಕೈ ಚಾಮರವನೀಡಾಡಿ ಭೂಮಿಗೊರಗಿದಳು ಭುಗಿಲೆಂದು| ಭುಗಿಲೆಂದು ಮಲಗಿದಾ ಕಾಮಿನಿಯ ಕಂಡ ಕಮಲಾಕ್ಷ|| ಕಂಗೆಟ್ಟಳೆಂದು ತನ್ನಂಗನೆಯ ಬಿಗಿದಪ್ಪಿ ಮುಂಗುರುಳ ತಿದ್ದಿ ಮುದ್ದಿಸಿ| ಮುದ್ದಿಸಿ ಮಾತಾಡ್ದ ಕಂಗಳಶ್ರಗಳ ಒರೆಸುತ್ತ|| ಸಲಿಗೆ ಮಾತಿನ ಬ…

Transliteration

He rajakannike buramana nanalla Varidhiyolagiddu badukuva| badukuvage marulade Naradana nudige nalinakshi|| Sisupala modalada vasudhepalara bittu Pasupalagolide sukumari| sukumari enalu Paravasaladaga mahalakshmi || I mata keli kai camaravanidadi Bumigoragidalu Bugilendu| Bugilendu malagida Kaminiya kanda kamalaksha|| Kangettalendu tannanganeya bigidappi Mungurula tiddi muddisi| muddisi matadda Ka…