Haridasa Sahitya — Vyasadasa

Rudra devara suladhi(Purandara dasaru)

ಧ್ರುವ ತಾಳ

Composer: Purandara Dasaru · Deity: Shiva / Rudra Devaru · Genre: Sulaadi

Kannada lyrics

ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತÀ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ ನಿಶ್ಚೇಷ್ಟಿತನಾಗಿದ್ದ ಕಾಣಿರೂ | ಹರಿಯಾಡಿಸಲಾಡುವರಜ ಭವಾದಿಗಳು ಸಿರಿ ಪುರಂದರ ವಿಠಲನೆ ಸರ್ವೋತ್ತಮ ಕಾಣಿರೋ ||2|| ರೂಪಕತಾಳ ಜನಕನ ಮನೆಯಲ್…

Transliteration

dhruva tALa Sivane durvAsa kANiro Sivane SukayOgi kANiro | Sivane aSvatthAma kANiro | Sivagutpattiyilla eMbarane neMbenayya | SivanAdiyalli bommana suta | bommanAdiyali accyutana sutaÀ | purandaraviThalanobbane ajAtanAgiyU jAtanAgi irutippa ||1|| maTTatALa hariSaMkararoLage uttamarArendu | parIkShisabEkendu Adiya yugadalli | sarasija saMBava surapatiyAdi suraru | sAranga pinAkigaLindeccADirenalu |…