Haridasa Sahitya — Vyasadasa

Rekke murida pakshi bayibittante gaga-

ರೆಕ್ಕೆ ಮುರಿದ ಹಕ್ಕಿ ಬಾಯಿಬಿಟ್ಟಂತೆ ಗಗ

Composer: Vijaya Dasaru · Deity: Hari · Genre: Ugabhoga

Kannada lyrics

ರೆಕ್ಕೆ ಮುರಿದ ಹಕ್ಕಿ ಬಾಯಿಬಿಟ್ಟಂತೆ ಗಗ ನಕ್ಕೆ ಮೊಗವೆತ್ತಿ ಕೂಗುತಿಪ್ಪೆ ಅಕ್ಕರೆ ನಿನಗಿನ್ನು ಬಾರದೆ ಎಲೊ ದೇ ವಕ್ಕಳ ಒಡಿಯಾನೆ ತ್ರಿಜಗದಲ್ಲಿ ರಕ್ಕಿಸಿ ಪೋದರೇನೋ ಸರ್ವ ಜೀವಿಗಳು ಯಾ ತಕ್ಕೆ ಎನ್ನೊಬ್ಬನ ಸುತ್ತಿಸುವಿ ಚಕ್ಕಂದವಾಗಿದೆ ನಿನಗೆ ನಾನೋರ್ವನೆ ಗತಿಯೆ ಮುಕುತಿಯಾಗಿಪ್ಪದೆ ಸರ್ವರಿಗೆ ಬಕ್ಕದಾಸನು ನಾನು ವಿಜಯವಿಠಲ ನಿನ್ನ ಲೆಖ್ಖಕ್ಕೆ ನಿಪನಾವಾವನಯ್ಯಾ||

Transliteration

Rekke murida pakshi bayibittante gaga- Nakke mogavetti kugutippe Akkara ninaginnu barade elo de- Varkala odeyane trijagadalli Thakkisi podareno sarvajivarolu Etakke Ennobbana tukkisuveyo Chakkandagide ninage nanorvane gatiye Mukkutiyagippade sarvarige Bakkadasanu nanu vijayavithala ninna Lekkakke modalu enisuvenenayya ||