Haridasa Sahitya — Vyasadasa
Rayara nodirai
ರಾಯರ ನೋಡಿರೈ
Composer: Haridasa · Deity: Raghavendra Teertharu · Genre: Dasara Pada
Kannada lyrics
ರಾಯರ ನೋಡಿರೈ – ಶ್ರೀ ಗುರು ರಾಯರ ಪಾಡಿರೈ || ಪ || ಶ್ರೀಯರಸನಪ್ರೀಯಾ-ಕಂಜಾಪ್ತಾಭಸು ಕಾಯಾ – ಕವಿಜನಗೇಯಾ || ಅ || ಶ್ರೀಸುಧೀ೦ದ್ರಕರಕಮಲಸಂಭೂತಾ- ಬಹುವಿಖ್ಯಾತಾ ಶ್ರೀಶನ ಗುಣಗಳ ತುತಿಸುವ ಯತಿಶಿರೋಮಣಿಯೋ- ಚಿಂತಾಮಣಿಯೋ ಈ ಸುಜನರ ಮನಸಿಗೆ ತೋರುವಿದಹ್ಲಾದ- ಸಿರಿಪ್ರಹ್ಲಾದ || ೧ || ದಂಡಕಮಂಡಲ ಕಾಷಾಯವು ಸುವಸನ-ವೇದವ್ಯಾಸನಾ ಪುಂಡರೀಕಪದಭಂಗಾ-ಮುನಿಕುಲೋತ್ತುಂಗ ಮಂಡಲದೊಳು ಬಹು ತೋಂಡರ ಪರಿಪಾಲಕ-ವರಬಾಲ್ಹೀಕ || ೨ || ತುಂಗಾತೀರದಿ ಮಂತ್ರಾಲಯದೊಳಗಿರುವೋ-ಕಲ್ಪತರುವೋ ಗಂಗಾಜನಕ ವಿಹಂಗವಾಹನ ಇಲ್ಲಿಹನು-ನತಸುರಧೇನು ಮಂಗಳಮಹಿಮರ ದರುಶನ ಮಾತ್ರ ಅಘನಾಶ-ಶ್ರೀಗುರುವ್ಯಾಸ || ೩ || ಪರಿಮಳ ವಿರಚಿಸಿ ಬುಧರಿಗೆ ಬೀರಿದ ಧೀರ-ಗುಣಗಂ…
Transliteration
rayara nodirai – sri guru rayara padirai || pa || sriyarasanapriya-kanjaptabasu kaya – kavijanageya || a || srisudhindrakara kamalasambuta- bahuvikyata srisana gunagala tutisuva yatisiromaniyo- chintamaniyo i sujanara manasige toruvidahlada- siriprahlada || 1 || danda kamandala kashayavu suvasana-vedavyasana pundarikapadabanga-munikulottunga mandaladolu bahu tondara paripalaka-varabalhika || 2 ||…