Haridasa Sahitya — Vyasadasa
Rathavanerida raghavendra
ರಥವನೇರಿದ ರಾಘವೇಂದ್ರ
Composer: Gopala Dasaru · Deity: Raghavendra Teertharu · Genre: Bhakti
Kannada lyrics
ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ|| ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋರಥವ ನೀಡುವೆನೆಂದು ||ಅ.ಪ|| ಚತುರ ದಿಕ್ಕುವಿದಿಕ್ಕುಗಳಲ್ಲಿ ಹರಿವೋ ಜನರಲ್ಲಿ ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ ನುತಿಸುತ ಪರಿಪರಿ ನತರಾಗಿ ಹರಿಗೆ ಗತಿಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಲ ಮಹಿಮಾನೆ ಆ ದಿನದಲ್ಲಿ ದಿತಿವಂಶದಲಿ ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ಮತಿಯಲ್ಲಿ ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ- ಪಿತನೊಲಿಸಿದೆ ಜಿತ ಕರುಣದಲಿ ||೨|| ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ ಪ್ರತಿವಾದಿಕದಳಿವನಕರಿಯೆ ಕರ ಮುಗಿವೆನು ದೊರೆಯೆ ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವರ ಮ…
Transliteration
rathavanerida raghavendra sath gunasandra satata margadi santata seviparige ati hitadali manorathava niduvenendu || chatura dikkudikkugaLalli aripa janaralli mitiyillade bandu Olaisutali varagala bedutali nutisuta paripari nataragiharige gati pelade sarvatha bidenendu ||1|| atulamahima niya dinadalli ditija vamshadali utapattiyagi uchitadali uttamamatiyalli atishayavirutire pitana badhege man- mat…