Haridasa Sahitya — Vyasadasa
rangavalida dAsarAya
ರಂಗವಲಿದ ದಾಸರಾಯ ಸಾಧುಸಂಗವಿಡಿಸಿ
Composer: Shyamasundaravitthala Dasaru · Deity: Sri Jagannatha Dasaru · Genre: Bhakti
Kannada lyrics
ರಂಗವಲಿದ ದಾಸರಾಯ | ಸಾಧು ಸಂಗವಿಡಿಸಿ ಕರುಣದಿ ಪಿಡಿ ಕೈಯ್ಯ ||pa|| ಕುಂಭಿಣಿ ಸುರನಾಥ | ನಂಬಿದೆ ನಿನ್ನ ಪಾದ ಬೆಂಬಿಡದಲೆ ಕಾಯೊ || ಸ್ತಂಭ ಮಂದಿರ | ಕಂಬು ಕಂಧರ ಭಕ್ತಮಂದಾರ ||1|| ಹರಿಕಥೆ ಸುಧಾಸಾರ | ಸುರಸಗ್ರಂಥವ ಜಗದಿ | ವಿರಚಿಸಿರುವ ನಿನ್ನ || ವರ ಉಪಕಾರ | ವರ್ಣಿಸಲಪಾರ | ಪರಮೋದಾರ ||2|| ಸಾಮಗಾನ ವಿಲೋಲ | ಶಾಮಸುಂದರವಿಠಲ ಸ್ವಾಮಿಯ ಭಕುತಿ | ನಿ | ಸ್ಸಿಮ ಪ್ರಹ್ಲಾದ | ಅನುಜ ಸಲ್ಹಾದ ನೀಡೆನಗಲ್ಹಾದ ||3||
Transliteration
rangavalida dAsarAya | sAdhu sangaviDisi karuNadi piDi kaiyya ||pa|| kuMBiNi suranAtha | naMbide ninna pAda beMbiDadale kAyo || staMBa mandira | kaMbu kandhara BaktamandAra ||1|| harikathe sudhAsAra | surasagranthava jagadi | viracisiruva ninna || vara upakAra | varNisalapAra | paramOdAra ||2|| sAmagAna vilOla | SyAmasundaraviThala svAmiya Bakuti | ni | ssima prahlAda | anuja salhAda nIDenagalhAda…