Haridasa Sahitya — Vyasadasa

Rangana nodire

ರಂಗನ ನೋಡಿರೆ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ರಂಗನ ನೋಡಿರೆ ರಾಜಕುವರ ನರ ಸಿಂಗ ದೇವ ನಮ್ಮ ದೇವಕಿ ಸುತನ ||ಪ|| ಹಮ್ಮಿನ ತಾಯಿತ ತೋಳ ಭಾಪುರಿಯೊ ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ ಸುಮ್ಮಹಿಮನ ಕಿವಿಯಲ್ಲಿ ಚೌಕುಲಿಯೊ ತಿಮ್ಮರಾಯ ನಿಟ್ಟ ಸೊಬಗಿನ ಬಗೆಯೊ ||೧|| ಶುಕ್ರವಾರದ ಪೂಜೆಗೊಂಬವನ ಸಕ್ಕರೆ ಪಾಲ್ ಮೊಸರು ಬೆಣ್ಣೆ ಮೆಲ್ಲುವನ ಘಕ್ಕನೆ ಸುರರಿಗೆ ಅಮೃತವಿತ್ತವನ ರಕ್ಕಸ ಕುಲವೈರಿ ರಾವಣಾಂತಕನ ||೨|| ಪಾಪವಿನಾಶಿನಿ ಸ್ನಾನವ ಮಾಡಿ ಪಾಪಗಳೆಲ್ಲವು ಬೇಗಬಿಟ್ಟೋಡಿ ಈ ಪರಿ ದಿನ ದಿನ ಮೂರುತಿ ನೋಡಿ ಶ್ರೀಪತಿ ಪುರಂದರ ವಿಠಲನ ಪಾಡಿ ||೩||

Transliteration

Rangana nodire rajakuvara nara Singa deva namma devaki sutana ||pa|| Hammina tayita tola bapuriyo Gammane gallemba gejjeya dhvaniyo Summahimana kiviyalli caukuliyo Timmaraya nitta sobagina bageyo ||1|| Sukravarada pujegombavana Sakkare pal mosaru benne melluvana Gakkane surarige amrutavittavana Rakkasa kulavairi ravanantakana ||2|| Papavinasini snanava madi Papagalellavu begabittodi I pari dina di…