Haridasa Sahitya — Vyasadasa
Ranga kolalunudalagi
ರಂಗ ಕೊಳಲನೂದಲಾಗಿ
Composer: Prasanna Venkata Dasaru · Deity: Vishnu · Genre: Dasara Pada
Kannada lyrics
ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು ಮಂಗಳಮಯವಾಯಿತು ।।ಪ।। ಧರೆಯ ಜನಂಗಳು ಜೀವ ಚೇತನ ಮರೆದು ಶ್ರೀರಂಗ ಧ್ಯಾನಪರರಾದರೊ ।।ಅ. ಪ।। ಬಾಡಿದ ಬಳ್ಳಿ ಮರ ಗೊನೆವಡಿದು ತೀಡುವ ಮಂದಮಾರುತನ ಕೂಡಿ ತೂ ಗ್ಯಾಡುವ ವನದ ಫಲದಗೊಂಚಲದಿ ಪಾಡಲೊಲ್ಲವಳಿಕುಲಗಳು ಹೇಡಿಗೊಂಡವು ಜಾಣಕ್ಕಿ ಗಿಣಿಯು ಮಾ ತಾಡದೆ ಕಳೆಗುಂದಿದವು ಕೋಗಿಲೆ ಓಡ್ಯಾಟ ವೈರಾಟ ಜರಿದು ಖಗಮೃಗ ಗಾಢ ನಿದ್ರಾವಶವಾದವೊ ।।೧।। ಕೆಳಗಿನುದಕ ಉಕ್ಕೇರಿ ಬಂದವು ತುಳುಕಿ ಚೆಲ್ಲಾಡಿ ನಿಂತಳು ಯಮುನೆ ಮ್ಯಾಲೆ ಮಾ ದೊಡ್ಡಿ ಮೇಘಾಳಿ ಬೋರಿಟ್ಟುವು ಕಲ್ಲು ಕರಗಿ ನೀರಾದವೋ ನಳಿನ ಚಂಪಕ ನಾಗ ಪುನ್ನಾಗ ಪಾ ಟಾಲ ಶಾವಂತಿಗಿ ಕೂಡ ಬಕುಳವು ಮಾಲತಿ ಜಾಜಿಯು ಪರಿಮಳಂಗೂಡಿ ನೀಲಾಂಗನಂಘ್ರಿಗೆ ಎರಗ…
Transliteration
Ranga kolalanudalagi rangayya kolalanudalu Mangalamayavayitu ||pa|| Dhareya janangalu jiva cetana maredu sriranga Dhyanapararadaro ||a. Pa|| Badida balli mara gonevadidu Tiduva mandamarutana kudi tu Gyaduva vanada Paladagonchaladi Padalollavalikulagalu Hedigondavu janakki giniyu ma Tadade kalegundidavu kogile Odyata vairata jaridu kagamruga Gadha nidravasavadavo ||1|| Kelaginudaka ukkeri bandavu T…