Haridasa Sahitya — Vyasadasa

Ramanama bajisidavage

ರಾಮನಾಮ ಭಜಿಸಿದವಗೆ

Composer: Gopala Dasaru · Deity: Vishnu · Genre: Dasara Pada

Kannada lyrics

ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ || PA || ಕಾಮ ಹರನ ಸತಿಯು ಸದಾ ನೇಮದಿಂದ ನೆನೆವ ಶ್ರೀರಾಮ ನಾಮ || A PA || ಶಿವನು ಧನ್ಯನಾದ ಮೌನಿ ಪಾವ೯ತಿ (ಯುವತಿ ) ಪಾವನಿ ಯಾದಳು ರವಿಯ ಸುತನು ವರವ ಪಡೆದ ಧ್ರುವನು ದಿವಿಜ ನೆನಿಸಿದ II 1 II ಕರಿವರ ಪ್ರಹ್ಲಾದ ದ್ರೌಪದಿ ವರ ವಿಭೀಷಣರೆಲ್ಲರೂ ಹರಿಯ ನಾಮ ಸ್ಮರಿಸಿ ಸುಖ- ಭರಿತರಾಗಲಿಲ್ಲವೇ || 2 || ಗಿರಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು ವರದ ಗೋಪಾಲ ವಿಠಲ ನಾಮ ದುರಿತಕಾನನ ಪಾವಕ || 3 ||

Transliteration

Ramanama Bajisidavage unte Bavada bandhana iipaii Kama harana satiyu sada nemadinda neneva srirama nama iiapaii Sivanu dhanyanada maunii yuvati pavanti pavani yadaluii Raviya sutanu varava padeda Idhruvanu divija nenisida II1II Karivara prahlada draupadi Ivara vibishanarellaru II Hariya nama smarisi suka-I baritaragalillave II2II Giraje rama mantradinda I parama mangaleyadalu II varada gopala vith…