Haridasa Sahitya — Vyasadasa
Rama sri ragunandana saranu
ರಾಮ ಶ್ರೀ ರಘುನಂದನ ಶರಣು
Composer: Helavanakatte Giriyammanavaru · Deity: Rama · Genre: Bhakti
Kannada lyrics
ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಕಾಮಧೇನು ವಿಶ್ವಭೀಮ ಸನ್ನುತ ಸೀತಾ ||pa|| ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ||1|| ಪಾಪರಹಿತ ಪಾವನ ಚರಿತ ಅಹಲ್ಯಾ ಶಾಪ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ ||2|| ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ||3||
Transliteration
Rama sri ragunandana saranu | sarva | Bauma busura vandya || pa || Somasekara mitra kamita paladata | Kamadhenu visva bima sannuta sita || A. Pa || Krura danava samhara kausalya kumara | BU | Bara hara Bajaka janoddhara vedantasara | Caruvadana mani hara kundaladhara | Vira ragava visvadhara karunisu sita || 1 || Papa rahita pavana carita ahalya | Sapa harana divya rupa ramaramana | Tapa viccedana…