Haridasa Sahitya — Vyasadasa

Rama rama rama

ರಾಮ ರಾಮ ರಾಮ

Composer: Purandara Dasaru · Deity: Vishnu · Genre: Dasara Pada

Kannada lyrics

ರಾಮ ರಾಮ ರಾಮ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ ||ಪ|| ತುಂಬಿದ ಪಟ್ಟಣಕೊಂಭತ್ತು ಭಾಗಿಲು ಸಂಭ್ರಮದರಸರು ಐದು ಮಂದಿ ಡಂಭಕತನದಿಂದ ತಿರುಗುವ ಕಾಯವ ನಂಬಿ ನೆಚ್ಚಿ ನೀವು ಕೆಡಬೇಡಿರೊ ||೧|| ನೆಲೆ ಇಲ್ಲದ ಕಾಯ ಎಲುವಿನ ಪಂಜರ ಬಲಿದು ಸುತ್ತಿದ ಚರ್ಮದ ಹೊದಿಕೆ ಮಲಮೂತ್ರಂಗಳು ಕೀವು ಕ್ರಿಮಿಗಳಿಂದ ಭರಿತ ದೇಹವ ನೆಚ್ಚಿ ಕೆಡಬೇಡಿರೊ ||೨|| ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ ಹರಿ ಸರ್ವೋತ್ತಮನೆಂದೆನ್ನಿರೊ ಪುರಂದರವಿಠಲನ ಚರಣವ ಭಜಿಸಿರೊ ದುರಿತ ಭಯಗಳಿಂದ ದೂರಾಗಿರೊ ||೩||

Transliteration

Raama raama raama enniro inthasvamiya namava mareyadiro ||pa|| Tumbida pattanakombattu bagilu Sambramadarasaru aidu mandi Dambakatanadinda tiruguva kayava Nambi necci nivu kedabediro ||1|| Nele illada kaya eluvina panjara Balidu suttida charmada hodike Malamutrangalu kivu krimigalinda Barita dehava necchi kedabediro ||2|| Hari brahma surarinda vandita agippa Hari sarvottamanendenniro Purandaravith…