Haridasa Sahitya — Vyasadasa

Rama krushnaru manege

ರಾಮಕೃಷ್ಣರು ಮನೆಗೆ ಬಂದರು

Composer: Purandara Dasaru · Deity: Hari · Genre: Bhakti

Kannada lyrics

ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ ।।ಪ।। ಕಾಮಧೇನು ಬಂದಂತಾಯಿತು ವರವ ಬೇಡಿರೆ ।।ಅ.ಪ॥ ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ।।೧।। ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ ಸುಕುಮಾರ ಸುಂದರವಾದ ಉಡಿಗೆ ಉಡುತಲಿ ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ ।।೨।। ಪೊಕ್ಕುಳಲಿ ಅಜನ ಪಡೆದ ದೇವದೇವನು ಚಿಕ್ಕ ಅಂಗುಷ್ಟದಲಿ ಗಂಗೆಯ ಪಡೆದನು ಮಕ್ಕಳ ಮಾಣಿಕ್ಯನವ ಪುರಂದರವಿಠಲನು ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ।।೩।।

Transliteration

Ramakrushnaru manege bandaru bagilu tereyire ||pa|| Kamadhenu bandantayitu varava bedire ||a.pa|| Cendu buguri cinni kolu gajjugavaduta Dundu mallige mudidu kolalanudi paduta Hinduvengala muddu mukada sobaga noduta Bandu madi baleyarodane sarasavaduta ||1|| Makara kumdala nilamuttina bavulidutali Kankana hara tolabandi todige todutali Sukumara sundaravada udige udutali Mukada kamala mugulunageya s…