Haridasa Sahitya — Vyasadasa

Rama embuva eradu aksharada

ರಾಮ ಎಂಬುವ ಎರಡು ಅಕ್ಷರದ

Composer: Purandara Dasaru · Deity: Rama · Genre: Bhakti

Kannada lyrics

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯ ||ಪ|| ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿತಗತವಾದ ಅತಿ ಪಾಪವನ್ನು ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧|| ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೆ ಕವಾಟವಾಗಿ ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತನೊಬ್ಬ ತಾ ಬಲ್ಲ ||೨|| ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು ಸಿರಿಯರಸ ಸನ್ಸ್ಕ್ರಿತ ನಾಮವನು ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ||೩||

Transliteration

Rama embuva eradu aksharada mahimeyanu Pamararu tavenu ballirayya ||pa|| Ra enda matradolu rakta mansadolidda Ayasthitagatavada ati papavannu Mayavanu madi maharaya muktiya koduva Dayavanu valmiki muniraya balla ||1|| Matte ma emdenalu horabidda papagalu Otti ola pogadamte kavatavagi Citta kayagala pavitra maduva pariya Baktavara hanumantanobba ta balla ||2|| Dhareyoli namakke sarimigilu illendu P…