Haridasa Sahitya — Vyasadasa
Rakshisenna ramana pancaparana
ರಕ್ಷಿಸೆನ್ನ ರಮಣ ಪಂಚಪರಣಾ
Composer: Vijaya Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ | ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ||pa|| ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು | ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ | ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ | ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ||1|| ವೀಣಾರೋಚನಾ ವಿe್ಞÁನಾಭಿಮಾನಿ ನಿ | ದಾನ ತ್ರಿಜಗದ್ಗುರುವೆ ಸುರತರುವೇ |ಕರವ ಮುಗಿದು ಕರವೇ | ಧ್ಯಾನದಿಂದಲಿ ಬೆರವೆ ಸುತ್ಯನ್ಯರವೇ | ಜನನವ ಬಿಡಿಸೋದು ಗಾನವ ನುಡಿಸೋದು ||2|| ಭಾಷಿಸುವ ಮಾತಂಗ ಪರ್ವತದಲಿ ತುಂಗಾ | ವಾಸವ ವಿನುತ ಸತ್ವಕಾಯಾ |ನಿತ್ಯ ಜಪಿತಾ | ಲೇಸು ಸುದರುಶನ ತೀರ್ಥ ತೀರದಲ್ಲಿಪ್ಪಾ | ಶ್ರೀಶ ವಿಜಯವಿಠ್ಠಲನ ದಾಸನ ಮಾಡಿ ಮುನ್ನಾ ||3||
Transliteration
Rakshisenna ramana pancaparana jagatpavana | Mokshadayaka yantroddharaka hanumanta ||pa|| Gatiya kaneno sada gatiyo enna manasu | Ninna namava bedide | hadi padide | Pratidina daya madide varavana bedide | Atisayadindali viprajitu virodhiya vipra||1|| Vinarocana vignana abimani ni | Dana trijagadguruve surataruve |karava mugidu karave | Dhyanadindali berave sutyanyarave | Jananava bidisodu ganava…