Haridasa Sahitya — Vyasadasa
Raja beediyolagindha
ರಾಜ ಬೀದಿಯೊಳಗಿಂದ
Composer: Vadirajaru · Deity: Vishnu · Genre: Dasara Pada
Kannada lyrics
ರಾಜ ಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದಾ | ಪ | ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ | ತಾಳ ಶಂಖ ಭೇರಿ ತಂಬೂರಿ ಮೊದಲಾದ ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ | ೨ | ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು ಮೋದದಿಂದ ಗಾಯಕರು ಮೌರಿ ಪಾಡಲು ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ ಅದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ | ೩ | ರಂಭಾ ಮೊದಲಾದ ಸುರರಮಣ…
Transliteration
Rajabeediyolagininda kasturiranga tejaneri meredu banda || Suttamutta saviraru saludeevatige hattudikkali belagutiha hagalu battigalu | ittaravu bhusuraru salugatti nintiralu matte sabhadinda teja mellane nadesutta jana ||1|| Talashakaberi tamate tamburi modalada melupanca kangalalli mige pogalolu | galigopurada munde rayabidadante sutta dhulugalannebbisi oyyalikkuta jana ||2|| Rambhe modaladanta…