Haridasa Sahitya — Vyasadasa

Raghavendra tirthanita

ರಾಘವೇಂದ್ರ ತೀರ್ಥನೀತ

Composer: Haridasa · Deity: Raghavendra Teertharu · Genre: Dasara Pada

Kannada lyrics

ರಾಘವೇಂದ್ರ ತೀರ್ಥನೀತ ರಾಜಿಸುವಾತ || ಪ || ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ || ಅ || ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳ ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ ಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆ ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ || ೧ || ಕಾಮಕ್ರೋಧಾದಿಗಳನೆ ಕಾಲಲೊದ್ದಾತ – ಈತ ವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾ ಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತ – ಪ್ರೌಢ ಶ್ರೀಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾ || ೨ || ಸಿಧ್ಧವಿದ್ಯೆಗಳಲಿ ಬಹು ಪ್ರಸಿಧ್ಧನಾದಾತಾ – ನಮ್ಮ ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ – ತುಂಗ ಭದ್ರತೀರದಲ್ಲಿ ತಾನು ವಾಸವಾದಾತ ||…

Transliteration

Ragavendra tirthanita rajisuvata || pa || Papaugagalellava nodisi punyagalivata || a || Banna bannadimda bahala bodhisuvata – bahala Sanna doddabishtagala sadhisuvata Punyavamtarimda bahu pujegombata – namage Kanna habbavaguvamte kanisuvata || 1 || Kamakrodhadigalane kalaloddata – Ita Vyomakesanamte nalku veda prakyata Bumiyolu durvadigalane buri geddata – praudha Srimadhvayogimdratirtha sishyanem…