Haridasa Sahitya — Vyasadasa

Raghavendra rajita

ರಾಘವೇ೦ದ್ರ –

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ರಾಘವೇ೦ದ್ರ – ರಾಜಿತ ಗುಣಸಾ೦ದ್ರ || ಪ || ರಾಘವೇ೦ದ್ರ ಗುರುರಾಯ ಘೋರ ಪಾ ಪೌಘಗಳೆಣಿಸದೆ ಪಾಲಿಸು ಬಿಡದೆ || ಅ || ಪ್ರಕಟಿಸಿ ತೋರಿದಿ ಮುಕುತಿಯ ಬೇಡಿದ ಭಕುತನ ಯೋಗ್ಯತೆ ನಿಖಿಳ ಜನರಿಗೆ || ೧ || ಭೃತ್ಯಗೆ ಬ೦ದಪಮೃತ್ಯು ಕಳೆದ ಸುಖ ವಿತ್ತು ಪೊರೆವ ಪುರುಷೋತ್ತಮದಾಸ || ೨ || ಹುತವಹಗುಣಿಸಿದ ರತನಮಾಲಿಕೆಯ ಕ್ಷಿತಿಪಗೆ ತ೦ದಿತ್ತತುಳಮಹಿಮನೆ || ೩ || ಕನಲಿದ ಜನಪನ ಅನುನಯದಲಿ ನಿ ನ್ನಣುಗನ ಮಾಡಿದ ಘನತರಚರಿತ || ೪ || ಚೂತಫಲರಸದಿ ಪೋತಮುಳುಗೆ ಮೃತ್ಯು ಭೀತಿ ಬಿಡಿಸಿದ ಅನಾಥರಕ್ಷಕ || ೫ || ಕ್ಷಿಪ್ರದಿ ತೋರಿದಿ ವಿಪ್ರರ ಮಹಿಮೆಯ ಆ ಪೃಥಿವೀಶಗೆ ಅಪ್ರತಿಗುರುವೇ || ೬ || ಪತಿತನ ನಿಜಯೋಗ್ಯತೆಯನರಿತು ಸ ದ್ಗತಿಯ ಪಾಲಿಸಿದೆ ಯತ…

Transliteration

Raghavendra – rajita gunasandra || pa || Raghavendra gururaya gora pa Paugagalenisade palisu bidade || a || Prakatisi toridi mukutiya bedida Bakutana yogyate nikila janarige || 1 || Brutyage bandapamrutyu kaleda suka Vittu poreva purushottamadasa || 2 || Hutavahagunisida ratanamalikeya Kshitipage tandittatulamahimane || 3 || Kanalida janapana anunayadali ni Nnanugana madida Ganataracarita || 4 ||…