Haridasa Sahitya — Vyasadasa

Raghavendra ninna

ರಾಘವೇ೦ದ್ರ ನಿನ್ನ

Composer: Haridasa · Deity: Raghavendra Teertharu · Genre: Dasara Pada

Kannada lyrics

ರಾಘವೇ೦ದ್ರ ನಿನ್ನ ಪಾದಸರಸಿಜಕೆ ಬಾಗುವೆ ಮನ್ಮನದ್ಹರಿಕೆ ಪೂರೈಸೊ – ರಾಘವೇ೦ದ್ರ || ಪ || ವಾಸುದೇವಾರ್ಚಕ ಭೂಸುರವ೦ದಿತ ದೋಷವ ಕಳೆವದು ದೇಶಿಕವರ್ಯ || ೧ || ವಿಷಯ೦ಗಳೆಲ್ಲ ದಹಿಸಿ ಯೋಗಮಾರ್ಗದಿ೦ ವಸುದೇವಪುತ್ರನೊಲಿಸಿಕೊ೦ಡ ಶಕ್ತ || ೨ || ಭೂತಪ್ರೇತಗಳ ಬಲಾತುರದಲಿ ಕಳೆ ವಾ ತು೦ಗಮಹಿಮನೆ ಭೂತಲದೊಳಗೆ || ೩ || ಅ೦ಗಜಶರದೂರ ಮ೦ಗಳವಿಗ್ರಹ ತು೦ಗಾತೀರವಾಸ ಪಿ೦ಗಳತೇಜ || ೪ || ದ೦ಡಕಾಷಾಯ ಕಮ೦ಡಲಧರ ಪ್ರ ಚ೦ಡ ಮಹಾತ್ಮ ಸುಪ೦ಡಿತರೊಡೆಯ || ೫ || ಸಾರುವ ಶರಣರ ಘೋರಿಸುತಿಪ್ಪ ಸ೦ ಸಾರ ಕಡಲಿಗೆ ಕರೀರಸ೦ಭವನೇ || ೬ || ಮೊರೆಹೊಕ್ಕದಾಸರ ಮರೆಯಾದೆ ಸಲಹಯ್ಯ ಪರಮತ ಉರಗಕ್ಕೆ ಗರುಡನೆನಿಪ || ೭ || ತ೦ದೆ ಪಾಲಿಸೊ ದಯಾಸಿ೦ಧು ಜಗದ್ಗುರು ಮ…

Transliteration

raghavendra ninna padasarasijake baguve manmanad~harike puraiso – raghavendra || pa || vasudevarcaka busuravandita doshava kalevadu desikavarya || 1 || vishayangalella dahisi yogamargadin vasudevaputranolisikonda sakta || 2 || butapretagala balaturadali kale va tungamahimane butaladolage || 3 || angajasaradura mangalavigraha tungatiravasa pingalateja || 4 || dandakashaya kamandaladhara pra canda m…