Haridasa Sahitya — Vyasadasa

Raghavendra munirayara

ರಗವೇನ್ದ್ರ ಮುನಿರಯರ ಸ್ಮರಣೆ |

Composer: Prasanna Venkata Dasaru · Deity: Raghavendra Teertharu · Genre: Dasara Pada

Kannada lyrics

ರಾಘವೇಂದ್ರ ಮುನಿರಾಯರ ಸ್ಮರಣೆ ಜಾಗಿಲ್ಲದೆ ಮಾಡಿ ನೀಗೊ ಬವಣೆ || ಪ || ಹಿಂದಿನ ಮೂರು ಜನುಮಗಳಲ್ಲೂ ಇಂದಿರೇಶನನು ವಲಿಸಿ ಮೆರೆದು ಬಲು ಕುಂದಿಲ್ಲದ ಪುಣ್ಯಗಳಿಸಿ ಸುರತರು ಮಂದಭಾಗ್ಯರಿಗೆ ಹಂಚುತಲಿಹರು || ೧ || ಭೂತಪ್ರೇತ ಸಕಲಾದಿ ಶಕುನಭಯ ಘಾತಚಕ್ರ ಜಾತಕದ ಪೀಡೆಗಳು ಗತಿಸುವವೀಯತಿ ಕರುಣೆತೋರಲು ನಿತ್ಯತುತಿಸೆ ನಿಜ ಮುಕುತಿ ನಿಶ್ಚಿತವು || ೨ || ಕಲಿಬಲ ಹೆಚ್ಚಿ ನಲುಗಿದ ಜನಕೆ ಸುಲಭದ ಮುಕುತಿ ದಾರಿಲಿ ನಿಲ್ಲಿಸಿ ನಳಿನನಾಭ ಪ್ರಸನ್ವೆಂಕಟನಾಜ್ಞೆಲಿ ಸುಲಲಿತ ಮಹಿಮೆ ತೋರಿ ನಲಿವ ಗುರು || ೩ ||

Transliteration

Ragavendra munirayara smarane | Jagillade madi nigo bavane || p || Hindina muru janumagalallu | Indiresana valisi meredu balu | Kundillada punya galisi surataru | Manda bagyarige hancutaliharu || 1|| Buta preta sakaladi Sakuna Baya | Gatacakra jatakada pidegalu | Gatisuvaviyati karune toralu | Nitya tutise nija mukuti niscitavu || 2 || Kalibala hecci nalugida janake | Sulabada mukuti darili nilisi…