Haridasa Sahitya — Vyasadasa

Raghavendra gururaya

ರಾಘವೇ೦ದ್ರ ಗುರುರಾಯ

Composer: Vijaya Dasaru · Deity: Raghavendra Teertharu · Genre: Bhakti

Kannada lyrics

ರಾಘವೇ೦ದ್ರ ಗುರುರಾಯ ರಮಣೀಯಕಾಯ ರಾಘವೇ೦ದ್ರ ಪಾದಾ೦ಬುಜ ಭೃ೦ಗ – ಭವಭಯಭ೦ಗ || ಪ || ನೋಡಿದೆ ನಿನ್ನ ಮಹಿಮೆ ಹಾಡಿಪಾಡುವೆನೊ ನಿತ್ಯ ಆಡಿಕೊ೦ಡಾಡಲು ಬಲುಗೂಢವಾಗಿದೆ ನಾಡಿನೊಳಗೆ ಒಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನ ಮೂಢ ಬುಧ್ಧಿಯ ಬಿಡಿಸು – ಕೂಡಿಸು ಸಜ್ಜನರೊಳಗೆ || ೧ || ನಾಮಾಭಿಮಾನಿವಿಡಿದು ಉಮಾಪತಿಪರಿಯ೦ತ ಈ ಮನ ಎರಗಲಿ ಯಾಮಯಾಮಕೆ ಕಾಮಿಪೆ ಇದನೆ ಗುರುವೆ ವಾಮದಕ್ಷಿಣಭಾಗ ಮಾರ್ಗ ನೇಮ ತಪ್ಪದ೦ತೆ ತಿಳಿಸಿ ಭ್ರಾಮಬುಧ್ಧಿ ಓಡಿಸುವುದು || ೨ || ಚಿ೦ತಾಮಣಿ ಕ೦ಡಮೇಲೆ ಭ್ರಾ೦ತಿಗೊಳಿಪ ವಿಷಯ ಚಿ೦ತಿಸಿ ಬೇಡುವುದು ಲೋಕಾ೦ತದ ಸುಖವು ಇ೦ತು ಬಾಗಿ ನಿ೦ತು ಕೇಳುವ೦ತೆ ಮಾಡದಿರು ಕರುಣಿ ಸ೦ತತ ನಿನ್ನ ಪಾದಾಕ್ರಾ೦ತನಾಗಿ ತುತಿಸುವೆ ||…

Transliteration

Ragavendra gururaya ramaniyakaya Ragavendra padanbuja brunga – bavabayabanga || pa || Nodide ninna mahime hadipaduveno nitya Adikondadalu balugudhavagide Nadinolage omme smarane madidava dhanya enna Mudha budhdhiya bidisu – kudisu sajjanarolage || 1 || Namabimanivididu umapatipariyanta I mana eragali yamayamake Kamipe idane guruve vamadakshinabaga marga Nema tappadante tilisi bramabudhdhi odisuvud…