Haridasa Sahitya — Vyasadasa
Raghavendra gururaja sutheja
ರಾಘವೇ೦ದ್ರ ಗುರುರಾಜಾ –
Composer: Jagannatha Dasaru · Deity: Raghavendra Teertharu · Genre: Dasara Pada
Kannada lyrics
ರಾಘವೇ೦ದ್ರ ಗುರುರಾಜಾ – ಸುತೇಜಾ || ಪ || ಸಾನುರಾಗದಿ ನಿನ್ನ ಧ್ಯಾನ ಮಾಡದ ಹೀನ ಮಾನವವಲ್ಲೆ ಅನುಮಾನವಿಲ್ಲದೆ ನಾ ಮಾನಗೈಯಲಿಬೇಕೆಂದನುಮಾನದಲಿ ನಿ ಧಾನಿಸಲಾಗೆ ಬಂದು ಸತ್ವರದಿಂದ ನೀನೆ ಹೃದಯದಿ ನಿಂದು ಆ ಕ್ಷಣ ಎನ್ನ ಜ್ಞಾನಾಂಧಕಾರಕೆ ಭಾನುರೂಪನಾದಿ || ೧ || ಕರುಣಾಸಾಗರ ನಿನ್ನ ಚರಣ ಸೋಕಲು – ಲೋಹ ಪರಶು ತಾಕಲು ಚಾಮಿಕರನಾದ ತೆರೆ ಎನ್ನ ದುರಿತರಾಶಿಯ ತರಿದು – ದೂತನ ಮೇಲೆ ಪರಮಾನುಗ್ರಹ ಗರೆದು ಪೊರೆದೆನೆಂಬ ಬಿರುದು ಲೋಕದಿ ಮೆರೆದು ಸಾರುತಲಿದೆ ಪರಮಹಂಸ ಗುರು || ೨ || ಶ್ರೀಶಕೇಶವಿಠ್ಠಲನ ಕರುಣಾವಿಲಾಸ ದಿ ಸುಖಿಸುವರೀ ಸಮಯದಲೆನ್ನ ದೋಷ ವಿಚಾರಿಸದೆ ಮಮತೆಯಿಂದ ಪೋಷಿಪರೆಂದರಿದೆ ಕಂಡ ಕಡಿ ಆಶೆಯಿಂದಲೆ ಬರಿದೆ ಚರಿಸಲು ಉ ದ…
Transliteration
Ragavendra gururaja – suteja || pa || Sanuragadi ninna dhyana madada Hina manavavalle anumanavillade na Managaiyalibekemdanumanadali ni Dhanisalage bandu satvaradimda Nine hrudayadi nindu A kshana enna J~janamdhakarake banurupanadi || 1 || Karunasagara ninna carana sokalu – loha Parasu takalu camikaranada Tere enna duritarasiya taridu – dutana mele Paramanugraha garedu poredenemba birudu Lokadi me…