Haridasa Sahitya — Vyasadasa
Raghavendra arati song
ಮಂಗಳ ಶ್ರೀ ರಾಘವೇಂದ್ರಗೆ
Composer: Haridasa · Deity: Raghavendra Teertharu · Genre: Dasara Pada
Kannada lyrics
ಮಂಗಳ ಶ್ರೀ ರಾಘವೇಂದ್ರಗೆ ಶುಭ ಮಂಗಳ ಸುಜನಾಂಬುಧಿ ಚಂದ್ರಗೆ ||pa|| ಶ್ರೀ ಸುಧೀಂದ್ರ ಕುಮಾರಗೆ ಮಂಗಳ ಭೂಸುರನುತ ಮಹಿಮಗೆ ಮಂಗಳ ದೇಶಿಕ ಕುಲವನ ಜಾತನಿಗೆ ಮಂಗಳ ಭಾಸುರ ಕೀರ್ತಿಯ ಪಡೆದವಗೆ ||1|| ವೃಂದಾವನ ದಿವಿಯೊಳಗೆ ಸುರದ್ರುಮ ದಂದದಿ ರಾಜಿಸುವವಗೆ ಮಂಗಳ ಅಂಧ ಪಂಗು ಮೂಕ ಬಧಿರರೀಪ್ಸಿತ ಸಂದೋಹ ಸಲಿಸುವ ಮುನಿಗೆ ||2|| ಭೂತ ಪ್ರೇತ ಬೇತಾಳ ವಿಪಿನ ಭಯ ವೀತಿಹೋತ್ರನಿಗೆ ಮಂಗಳ ವಾತ ಜನಕ ಜಗನ್ನಾಥ ವಿಠ್ಠಲನ ದೂತರ ಸಲಹುವ ದಾತನಿಗೆ ||3||
Transliteration
mangala gururaghavendrage jaya mangala sujanambudhicandrage sri sudhindrakumarage mangala bhusuranvitanilayage mangala daisika kulavanajakage mangala bhasura kirtiya padedavage||1|| varundavanadolage suradruma anandadi rajisuvage mangala andha pan0gu muka badhiraripsita sandoha salisuva guruvaryage||2|| bhuta pretala vipinabhaya vitihotrage subhamangala datajanaka jagannathavitthalana dutara salah…