Haridasa Sahitya — Vyasadasa

Raayara nodirai

ರಾಯರ ನೋಡಿರೈ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ರಾಯರ ನೋಡಿರೈ – ಶುಭತಮ ಕಾಯರ ಪಾಡಿರೈ || ಪ || ತೋಯಜಪತಿ ನಾರಾಯಣ ಪದಯುಗ ಭೃಂಗ – ಭಕ್ತ ಕೃಪಾಂಗ || ಅ || ಸುಂದರ ಮುಖ ಅರವಿಂದ ಲೋಚನ – ಘ್ರಾಣ ಕುಂದಕುಟ್ಮಲಸಮರದನ – ರಾಜಿತವದನ ಮಂದಸ್ಮಿತಯುತ ದ್ವಂದ್ವ ಓಷ್ಟ ಶ್ರುತಿ ಛಂದವಾಗಿಹ ಚುಬುಕಾ – ಫಾಲಾದಿ ತಿಲಕಾ ಕಂಧರಯುತ ಪುರಂದರ ಕರಿಕರ ವೃಂದವಾಗಿಹ ಬಾಹುಯುಗಳಾ – ಮೂಲಾಂಕಿತ ಕೊರಳ ಇಂದಿರಾಪತಿ ನಿಜಮಂದಿರವೆನಿಸುವ ಸುಂದರ ಹೃದಯದಿ ನಾಮಾ – ಹಚ್ಚಿದ ಪ್ರೇಮಾ || ೧ || ಹಸ್ತದಿ ರಾಜಿಪ ಪುಸ್ತಕ ಮಣಿಮಾಲೆ ಸ್ವಸ್ಥಿಕಾಸನಸ್ಥಿತಮೋದ – ಕೃತ ವಿನೋದ ಮಸ್ತಕದಿಂದಲಿ ವಿಸ್ತ್ರಿತ ಕಾಷಾಯ ವಸ್ತ್ರದಿ ಶೋಭಿಪ ಗಾತ್ರ – ಶುಭ ಚಾರಿತ್ರ ಸ್ವಸ್ಥ ಮನದಿ ಪ್ರಾಶಸ್ಥ ಹರಿಯ ಪಾದ ಸ್ವಸ್ತಿಕ ಯುಗಳ…

Transliteration

Rayara nodirai – subatama kayara padirai || pa || Toyajapati narayana padayuga Brunga – Bakta krupanga || a || Sundara muka aravinda locana – grana Kundakutmalasamaradana – rajitavadana Mandasmitayuta dvandva oshta Sruti Chandavagiha cubuka – paladi tilaka Kandharayuta purandara karikara Vrundavagiha bahuyugala – mulankita korala Indirapati nijamandiravenisuva Sundara hrudayadi nama – haccida prem…