Haridasa Sahitya — Vyasadasa

Raamayanam

ಕಂದನೆಂದೆನಿಸಿದ

Composer: Harapanahalli Bheemavvanavaru · Deity: Rama · Genre: Bhakti

Kannada lyrics

ಕಂದನೆಂದೆನಿಸಿದ ಕೌಸಲ್ಯದೇವಿಗೆ ರಾಮ ಎನಬಾರದೆ ಇಂದಿರಾಪತಿ ರಾಮಚಂದ್ರಗೆ ಶ್ರೀರಘುರಾಮ ಎನಬಾರದೆ ||1|| ಶಿಶುವಾಗಿ ಅವತಾರ ಮಾಡಿದ ದಶರಥನಲಿ ರಾಮ ಎನಬಾರದೆ ಋಷಿಯಜ್ಞ ಸಲಹಿ ರಕ್ಕಸರನೆ ಕೊಂದ ಶ್ರೀರಾಮ ಎನಬಾರದೆ ||2|| ನೀಟಾಗಿ ನೆನೆ ಭಾನುಕೋಟಿತೇಜ ಶ್ರೀರಾಮ ಎನಬಾರದೆ ಸಾತ್ವಿಕ ದೈವವೆ ತಾಟಕಾಂತಕ ಶ್ರೀರಾಮ ಎನಬಾರದೆ ||3|| ಪಾದನಖವು ಸೋಕಿ ಪಾದನಾಶನವಾಗೆ ರಾಮ ಎನಬಾರದೆ ಶ್ರೀಪತಿ ಕರುಣದಿ ಶಿಲೆಯು ಸ್ತ್ರೀಯಾಗಲು ರಾಮ ಎನಬಾರದೆ ||4|| ಸಕಲ ಸದ್ಗುಣ ಪೋಗಿ ಮಿಥಿಲಾ ಪಟ್ಟಣದಿ ರಾಮ ಎನಬಾರದೆ ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ರಾಮ ಎನಬಾರದೆ ||5|| ಚೆಲ್ವೆ ಜಾನಕಿ ಮಲ್ಲಿಗೆಯ ವನಮಾಲೆಯು ರಾಮ ಎನಬಾರದೆ ವಲ್ಲಭಗ್ಹಾಕಲು…

Transliteration

Kandanendenisida kausalyadevige raama enabarade Indirapati raamachandrage sriraguraama enabarade ||1|| Sisuvagi avatara madida dasarathanali raama enabarade Rushiyaj~ja salahi rakkasarane konda sriraama enabarade ||2|| Nitagi nene banukotiteja sriraama enabarade Satvika daivave tatakantaka sriraama enabarade ||3|| Padanakavu soki padanasanavage raama enabarade Sripati karunadi Sileyu striyagalu ra…