Haridasa Sahitya — Vyasadasa
Raama seetha urutani pada
ಸೀತಾ ರಾಮ ಉರುಟಾಣಿ ಪದ - ಶ್ರೀ ಮೋಹನ ದಾಸರು
Composer: Mohana Dasaru · Deity: Rama · Genre: Bhakti
Kannada lyrics
ಸೀತಾ ರಾಮ ಉರುಟಾಣಿ ಪದ - ಶ್ರೀ ಮೋಹನ ದಾಸರು ಜಯ ಜಯ ರಾಮ ಜಯ ಜಯ ಜಯ ನಮ್ಮ ಜಾನಕೀ ರಮಣಗೆ ॥ ಪ ॥ ಇಂದಿರಾದೇವಿ ರಮಣಿ ಶರಣ್ಯ ಮಂದರ ಗಿರಿಧರ ಶರಣ್ಯ ಕಂದನ ನುಡಿ ಕೇಳಿ ಕಂಬದಿಂದಲಿ ಬಂದ ಸಿಂಧುಶಯನ ಸಲಹುವಾದೆನ್ನ ॥ ೧ ॥ ಗುರು ವಿಜಯದಾಸರ ಚರಣ ಸರಸಿರುಹವ ಮನದೊಳಾಗಿರಿಸಿ ಹರಿ ಸರ್ವೋತ್ತಮ ಮಂಗಳ ಚರಿತೆಯ ವಿರಚಿಸುವೆನು ಸುಜನರು ಕೇಳಿ ॥ ೨ ॥ ಮುತ್ತೈದೆಯರೆಲ್ಲಾ ಬೇಗದಿ ಬಂದು ಆರ್ತಿಯಿಂದಲಿ ಶೃಂಗಾರವಾಗಿ ಚಿತ್ತಜನಯ್ಯನ ಉರುಟಣೆ ಎನುತಲಿ ಮತ್ತ ಗಮನೆಯರು ಬಂದರಾಗ ॥ ೩ ॥ ಸರಸ್ವತಿ ಭಾರತಿ ಮೊದಲಾದ ಸರಸಿಜಮುಖಿಯರೆಲ್ಲಾರು ನೆರೆದು ಸರಸ ಉರುಟಣಿಯ ಮಾಡಬೇಕೆನುತಲಿ ಕರೆಸಿದರಾಗ ಮುತ್ತೈದೆಯರಾಗ ॥ ೪ ॥ ಹೇಮಮಯದ ಮಂಟಪದೊಳಗೆ ಪ್ರೇಮದಿಂ…
Transliteration
raama seetha urutani pada(Kannada) jaya jaya rAma jayajaya jaya namma jAnakI ramaNagE ||pa|| indirAdEvi ramaNi SaraNyamandara giridhara SaraNyakaMdana nuDi kELi kaMbadindali bandasindhu Sayana salahuvAdenna ||1|| guru vijayadAsara caraNAsarasiruhava manadoLAgirisihari sarvOttama mangaLa cariteyaviracisuvenu sujanaru kELi ||2|| muttaiderellA bEgAdi bandu^^artiyindali SRungAravAgi cittajanayyana uru…